ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಪೊಲೀಸರಿಂದ ಮಹಿಳೆಯರಿಗೆ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಉಚಿತವಾಗಿ ಮನೆಗೆ ತಲುಪಿಸಲಿದ್ದಾರೆ. ಅದಕ್ಕಾಗಿ ಈ ಒಂದು ಸಂಖ್ಯೆಗೆ ಕರೆ ಮಾಡಿ ಅಂತ ಸುದ್ದಿ ವೈರಲ್ ಆಗಿತ್ತು. ಹಾಗಾದ್ರೇ ಅದು ಏನು.? ಅದರ ಅಸಲಿ ಸತ್ಯವೇನು ಅಂತ ಮುಂದೆ ಓದಿ.
ಹೀಗಿದೆ ವೈರಲ್ ಆಗಿರುವಂತ ಸುದ್ದಿ
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಒಂಟಿಯಾಗಿರುವ ಯಾವುದೇ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದಾದ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ವಾಹನವನ್ನು ಕೋರಬಹುದು ಮತ್ತು ವಿನಂತಿಸಬಹುದು. ಅವರು 24×7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್‌ಎಚ್‌ಒ ವಾಹನವು ಅವನನ್ನು ಸುರಕ್ಷಿತವಾಗಿ ಅವನ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು. ನಿಮಗೆ ತಿಳಿದಿರುವ ಎಲ್ಲರಿಗೂ ಈ ಸಂದೇಶವನ್ನು ಹರಡಿ.
ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ.. ಅದನ್ನು ಉಳಿಸಲು ಅವರನ್ನು ಕೇಳಿ.. ಎಲ್ಲಾ ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೊಳ್ಳಿ.
ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ನೀಡಬಹುದು.. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ಪತ್ತೆ ಹಚ್ಚಬಹುದು ಮತ್ತು ನಿಮಗೆ ಸಹಾಯ ಮಾಡಬಹುದು. ಭಾರತದಾದ್ಯಂತ ಅನ್ವಯಿಸುತ್ತದೆ.
ನಿಮಗೂ ಹೀಗೆ ಸಂದೇಶ ಬಂದಿಯ್ಯಾ?
ಈ ಮೇಲ್ಕಂಡ ಸಂದೇಶ ನಿಮಗೂ ಬಂದಿರಬೇಕು. ನೀವಿರುವಂತ ವಾಟ್ಸ್ ಆಪ್ ಅನೇಕ ಗ್ರೂಪ್ ನಲ್ಲೂ ಹರಿದಾಡಿರಬೇಕು. ಆದರೇ ಹೀಗೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿ ನೀಡಲಾಗಿರುವಂತ ಸಂಖ್ಯೆ ಕೂಡ ಫೇಕ್. ಯಾರೂ ಇದನ್ನು ನಂಬಬೇಡಿ ಅಂತ ಕರ್ನಾಟಕ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.
https://twitter.com/KarnatakaCops/status/1826612128360661389