ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಬಿಎಂಟಿಸಿಯಿಂದ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ಹೊಸ ಮಾರ್ಗದಲ್ಲಿ ದಿನಾಂಕ 26-08-2024ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭಗೊಳ್ಳಲಿದೆ.
ಈ ಬಗ್ಗೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ, ಯಶವಂತಪುರ ರೈಲ್ವೆ ನಿಲ್ದಾಣದಿಂದ ಯಶವಂತಪುರ ಬಸ್ ನಿಲ್ದಾಣ, ದಂಡು ರೈಲ್ವೆ ನಿಲ್ದಾಣ, ಈಸ್ಟ್ ರೈಲ್ವೆ ನಿಲ್ದಾಣ ಹಾಗೂ ಮಾರುತಿ ಸೇವಾ ನಗರ ಮಾರ್ಗವಾಗಿ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ನೂತನ ಮಾರ್ಗ ಸಂಖ್ಯೆ 300-ಆರ್ ಅನ್ನು ದಿನಾಂಕ: 26.08.2024 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ :
ಮಾರ್ಗ ಸಂಖ್ಯೆ : 300-ಆರ್
ಬಿಡುವ ವೇಳೆ | ||
ಯಶವಂತಪುರ ರೈಲ್ವೆ ನಿಲ್ದಾಣ | ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ | |
0500, 0605, 0720, 0825, 0945, 1110, 1425, 1610, 1710, 1845, 1945, 2130 | 0500, 0605, 0710, 0830, 0930, 1115, 1455, 1555, 1730, 1830, 1950, 2050 |
’36 ಗುಂಟೆ ಸರ್ಕಾರಿ ಭೂಮಿ ಒತ್ತುವರಿ’ ಮಾಡಿದ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ, 5000 ದಂಡ
BREAKING : ರಾಜ್ಯದಲ್ಲಿ `ಬೈಕ್ ವ್ಹೀಲಿಂಗ್’ ಹುಚ್ಚಾಟಕ್ಕೆ ಮತ್ತೊಂದು ಬಲಿ : ಚಿಕಿತ್ಸೆ ಫಲಿಸದೇ ಅರ್ಚಕ ಸಾವು!