ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಗುರುವಾರ ದರ್ಶನ್ರ ಅಭಿಮಾನಿಯೊಬ್ಬ ಕೊರಳಿಗೆ ದರ್ಶನ್ ಹಾಕಿಕೊಂಡು ಜೈಲಿನ ಬಳಿ ಬಂದು ದರ್ಶನ್ ಅನ್ನು ಬಿಡುಗಡೆ ಮಾಡುವಂತೆ ಗಲಾಟೆ ಮಾಡಿದ್ದಾನೆ.
ಹೌದು ಪರಪ್ಪನ ಅಗ್ರಹಾರ ಜೈಲಿನ ಬಳಿ ನಟ ದರ್ಶನ್ ಅಭಿಮಾನಿ ಗಲಾಟೆ ಮಾಡಿದ್ದು, ಜೈಲಿನಿಂದ ದರ್ಶನ್ ಬಿಡುಗಡೆ ಮಾಡುವಂತೆ ಅಭಿಮಾನಿ ಒಬ್ಬ ಆಗ್ರಹಿಸಿದ್ದಾನೆ. ಕೊಲೆ ಆರೋಪಿ ನಟ ದರ್ಶನ್ ಫೋಟೋ ಹಿಡಿದು ರವಿಕುಮಾರ್ ಎಂಬ ಅಭಿಮಾನಿ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದಿದ್ದ.
ರವಿಕುಮಾರ್ ಕರುನಾಡ ಯುವ ಸೇನೆ ಅಧ್ಯಕ್ಷನಾಗಿದ್ದು, ಕೊಲೆ ಆರೋಪಿ ದರ್ಶನ್ ಬಿಡುಗಡೆ ಮಾಡುವಂತೆ ಉರುಳು ಸೇವೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಉರುಳು ಸೇವೆ ಮಾಡಲು ಮುಂದಾದಾಗ ಪೊಲೀಸರು ರವಿಕುಮಾರ್ ನನ್ನ ಅಡ್ಡಗಟ್ಟಿದ್ದಾರೆ.
ಈ ವೇಳೆ ರವಿಕುಮಾರ್ ಜೈಲಿನ ಬಳಿಯೆ ತೆಂಗಿನಕಾಯಿ ಕೂಡ ಒಡೆಯಲು ಮುಂದಾಗಿದ್ದು, ಪೊಲೀಸರು ಆತನನ್ನು ತಡೆದಿದ್ದಾರೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾನೆ.ರವಿಕುಮಾರ್ ನಾನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.