ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಪೊಲೀಸರು ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಅವರನ್ನು ಎ.2 ಆರೋಪಿಯಿಂದ ಎ.1 ಆರೋಪಿಯಾಗಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಬಂಧಿಸಲಾಗಿತ್ತು. ಎ.1 ಆರೋಪಿಯನ್ನಾಗಿ ಪವಿತ್ರಾ ಗೌಡ ಹಾಗೂ ಎ.2 ಆರೋಪಿಯನ್ನಾಗಿ ನಟ ದರ್ಶನ್ ಮಾಡಲಾಗಿತ್ತು. ಪ್ರಕರಣದ ತನಿಖೆಯ ವೇಳೆಯಲ್ಲಿ ಎ.2 ಆರೋಪಿಯನ್ನಾಗಿ ನಟ ದರ್ಶನ್ ಮಾಡಿದ್ದನ್ನು, ಚಾರ್ಜ್ ಶೀಟ್ ಸಲ್ಲಿಕೆಯ ವೇಳೆಯಲ್ಲಿ ಬದಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಎ.1 ಆರೋಪಿಯಾಗಿರುವಂತ ಪವಿತ್ರಾ ಗೌಡ ಅವರನ್ನು ಎ.2 ಆರೋಪಿಯನ್ನಾಗಿ, ಎ2 ಆರೋಪಿಯಾಗಿರುವಂತ ನಟ ದರ್ಶನ್ ಅವರನ್ನು ಎ.1 ಆರೋಪಿಯನ್ನಾಗಿ ಮಾಡಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಮೊದಲನೇ ಆರೋಪಿಯಾಗಿದ್ದಂತ ಪವಿತ್ರಾ ಗೌಡ ಎ.2 ಆರೋಪಿಯಾದ್ರೇ, ಎ.1 ಆರೋಪಿಯಾಗಿ ನಟ ದರ್ಶನ್ ಹೆಸರನ್ನು ಪೊಲೀಸರು ಉಲ್ಲೇಖಿಸಿದ್ರೇ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಮತ್ತಷ್ಟು ಸಂಕಷ್ಟ ಎದುರಾದಂತೆ ಆಗಲಿದೆ.
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ’61 ಕೇಸ್’ ದಾಖಲಾಗಿವೆ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ
BIG NEWS: ಆಲಮಟ್ಟಿ ಡ್ಯಾಂ ಬಳಿ ‘ಗಂಗಾ ಆರತಿ’ ಮಾದರಿಯಲ್ಲಿ ‘ಕೃಷ್ಣಾ ಆರತಿ’: ಡಿಸಿಎಂ ಡಿ.ಕೆ ಶಿವಕುಮಾರ್