ವಿಜಯಪುರ : ಕೇಂದ್ರ ಸಚಿವ HD ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡುವ ಪರಿಸ್ಥಿತಿ ಬಂದರೆ ಬಂಧಿಸುತ್ತೇವೆ ಎಂದು ಬೆಳಿಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಹೆಚ್‍ಡಿ ಕುಮಾರಸ್ವಾಮಿ ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದು ಟಾಂಗ್ ನೀಡಿದ್ದರು. ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಬಂಧಿಸಲು ನೂರಲ್ಲ ಒಬ್ಬ ಕಾನ್ಸ್ಟೇಬಲ್ ಸಾಕು ಎಂದು ಮತ್ತೆ ಟಾಂಗ್ ನೀಡಿದ್ದಾರೆ.
ಇಂದು ವಿಜಯಪುರ ಜಿಲ್ಲೆಯ ನಿಡಗುಂದಿ ಸಮೀಪ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, HD ಕುಮಾರಸ್ವಾಮಿ ಬಂಧಿಸಲು ನೂರು ಸಿದ್ದರಾಮಯ್ಯ ಅಲ್ಲ ಒಬ್ಬ ಕಾನ್ಸ್ಟೇಬಲ್ ಸಾಕು ಎಂದು ತಿರುಗೇಟು ನೀಡಿದರು.
ಅರೆಸ್ಟ್ ಮಾಡುವುದು ಯಾರು? ನಾನು ಮಾಡ್ತೀನ? ಪೊಲೀಸರು ಮಾಡುತ್ತಾರೆ. ನನಗೆ ಹೆದರಿಕೊಳ್ಳದೆ ಹೋಗಿದ್ದರೆ ಎಚ್ ಡಿ ಕುಮಾರಸ್ವಾಮಿ ಪ್ರೆಸ್ ಮೀಟ್ ಮಾಡುತ್ತಿದ್ದರ? ಕುಮಾರಸ್ವಾಮಿ ಹಿಟ್ ಅಂಡ್ ರನ್.ಯಾವ ಪ್ರಕರಣವನ್ನು HD ಕುಮಾರಸ್ವಾಮಿ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಿಲ್ಲ. ಪೆನ್ ಡ್ರೈವ್, ಪೆನ್ ಡ್ರೈವ್ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಸಿಎಂ ಸಿದ್ದರಾಮಯ್ಯ ಅಣಕಿಸಿದರು.