ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪುಂಡು, ಪೋಕರಿಗಳು ಕಿತ್ತು ತಿನ್ನುವವರಿಗೆ ಪೊಲೀಸರ ಭಯ ಇಲ್ಲದಂತೆ ಆಗಿದೆ.ಕೆಲಸ ಮಾಡುವ ಡೆಲಿವರಿ ಬಾಯ್ಸ್ ಮೇಲೆ ಇದೀಗ ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿ, ಹೊಡೆದು ದರೋಡೆ ಮಾಡಿರುವ ಘಟನೆ ಕೊನೆನೇ ಅಗ್ರಹಾರದ ವಿನಾಯಕ ನಗರದ ಬಿ ಬ್ಲಾಕ್ ಅಲ್ಲಿ ನಡೆದಿದೆ.
ಹೌದು ನಡು ರಸ್ತೆಯಲ್ಲಿ ಡೆಲಿವರಿ ಬಾಯ್ಸ್ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ಒಂದೇ ಕಡೆ ಎರಡು ದರೋಡೆ ಮಾಡಿದ್ದರು ಕೂಡ ಪೊಲೀಸರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಆಗಸ್ಟ್ 4ರಂದು ಹಾಗೂ 20ರಂದು ಮಧ್ಯರಾತ್ರಿ ಒಂದೇ ಸ್ಥಳದಲ್ಲಿ ದರೋಡೆ ಮಾಡಲಾಗಿದೆ. ಕೋನೆನ ಅಗ್ರಹಾರದ ವಿನಾಯಕ್ ನಗರದ ಬಿ ಬ್ಲಾಕ್ ಅಲ್ಲಿ ನಡೆದಿದೆ. ಜೀವನ್ ಭೀಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.