ನವದೆಹಲಿ : ಭಾರತೀಯ ಐಸಿಸಿ ಅಧ್ಯಕ್ಷರು: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಸ್ಥಾನಕ್ಕೆ ಜಯ್ ಶಾ ಅವರನ್ನ ನೇಮಿಸಬಹುದು ಎಂದುವರದಿಯಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಅವರಿಗೆ ಬೆಂಬಲ ನೀಡಿದೆ ಎನ್ನಲಾಗ್ತಿದೆ. ಇದು ನಿಜವಾದಲ್ಲಿ ಐಸಿಸಿ ಇತಿಹಾಸದಲ್ಲಿ ಐಸಿಸಿ ಅಧ್ಯಕ್ಷರಾದ ಭಾರತದ 5ನೇ ವ್ಯಕ್ತಿ ಶಾ ಆಗಲಿದ್ದಾರೆ. ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಿದ್ರೆ, ಇದಕ್ಕೂ ಮುನ್ನ ಐಸಿಸಿಯ ಇತಿಹಾಸದಲ್ಲಿ ಭಾರತೀಯ ಅಧ್ಯಕ್ಷರು ಯಾರಾಗಿದ್ರು.? ಮುಂದೆ ಓದಿ.
ಜಗಮೋಹನ್ ದಾಲ್ಮಿಯಾ (1997–2000) : ಜಗಮೋಹನ್ ದಾಲ್ಮಿಯಾ ಭಾರತದಿಂದ ಮೊದಲ ಐಸಿಸಿ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದರು. ಅವರು 1997 ರಿಂದ 2000 ರವರೆಗೆ ಈ ಹುದ್ದೆಯಲ್ಲಿದ್ದರು. 1987 ರಲ್ಲಿ ರಿಲಯನ್ಸ್ ವಿಶ್ವಕಪ್ ಮತ್ತು 1996 ರಲ್ಲಿ ವಿಲ್ಸ್ ವಿಶ್ವಕಪ್’ನ್ನ ಭಾರತವು ಸಹ-ಆತಿಥ್ಯ ವಹಿಸಲು ದಾಲ್ಮಿಯಾ ಕಾರಣ. ಬಿಸಿಸಿಐಯನ್ನ ವಿಶ್ವದ ಶ್ರೀಮಂತ ಮಂಡಳಿಯನ್ನಾಗಿ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಬಂಗಾಳ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಶರದ್ ಪವಾರ್ (2010-2012) : 2010 ರಲ್ಲಿ ಭಾರತದ ರಾಜಕಾರಣಿ ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದರು. ಅವರು ಇಂಗ್ಲೆಂಡ್’ನ ಡೇವಿಡ್ ಮೋರ್ಗನ್ ಬದಲಿಗೆ ಆಯ್ಕೆಯಾಗಿ 2 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಆ ಸಮಯದಲ್ಲಿ ಅವರು ಭಾರತ ಸರ್ಕಾರದಲ್ಲಿ ಕೃಷಿ ಸಚಿವರೂ ಆಗಿದ್ದರು. ಪವಾರ್ 2008 ರಿಂದ ಐಸಿಸಿ ಉಪಾಧ್ಯಕ್ಷರೂ ಆಗಿದ್ದಾರೆ. ಪವಾರ್ 2005 ರಿಂದ 2008 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಅವರು 2004 ರಿಂದ 2005 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದ ರಣಬೀರ್ ಸಿಂಗ್ ಮಹೇಂದ್ರ ಅವರನ್ನ ಬದಲಾಯಿಸಿದರು.
ಎನ್. ಶ್ರೀನಿವಾಸನ್ (2014–2015) : ಈ ಪಟ್ಟಿಯಲ್ಲಿ ಎನ್. ಶ್ರೀನಿವಾಸನ್ ತೃತೀಯ ಸ್ಥಾನ ಪಡೆದಿದ್ದಾರೆ. ಅವರ ಅಧಿಕಾರಾವಧಿ 2014 ರಿಂದ 2015 ರವರೆಗೆ ಇತ್ತು. ಸಧ್ಯ ಶ್ರೀನಿವಾಸನ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಲೀಕರಾಗಿದ್ದಾರೆ.
ಶಶಾಂಕ್ ಮನೋಹರ್ (2015-2020) : ಶಶಾಂಕ್ ಮನೋಹರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಸಿಸಿಯಲ್ಲಿ ಅವರ ಅಧಿಕಾರಾವಧಿಯು 2015 ರಿಂದ 2020 ರವರೆಗೆ ಇತ್ತು. ಇದು ಯಾವುದೇ ಭಾರತೀಯರ ಸುದೀರ್ಘ ಅವಧಿಯಾಗಿದೆ. ವಿಶೇಷವೆಂದ್ರೆ, ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ವತಃ ಶಶಾಂಕ್ ರಾಜೀನಾಮೆ ನೀಡಿದ್ದಾರೆ. 2008ರಿಂದ 2011ರವರೆಗೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ಬಿಸಿಸಿಐನಲ್ಲಿ ಶಶಾಂಕ್ ಅವರ ಮೊದಲ ಅವಧಿ 2008 ರಿಂದ 2011 ರವರೆಗೆ ಮತ್ತು ಅವರ ಎರಡನೇ ಅವಧಿ ಅಕ್ಟೋಬರ್ 2015 ರಿಂದ ಮೇ 2016 ರವರೆಗೆ ಇತ್ತು.
ಸ್ಟಾರ್ಬಕ್ಸ್ ಹೊಸ ‘CEO’ ಅಸಾಧಾರಣ ಪ್ರಯಾಣ ; ಕಚೇರಿಗೆ ತೆರಳಲು ಖಾಸಗಿ ಜೆಟ್’ನಲ್ಲಿ 1,600 ಕಿ.ಮೀ ಹಾರಾಟ
ಕಾರವಾರದಲ್ಲಿ ಅರಳಿದ ‘ಕಮಲ’ : ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ‘ಬಿಜೆಪಿ’ : ಹಾಲಿ ಕಾಂಗ್ರೆಸ್ ಶಾಸಕಗೆ ಮುಖಭಂಗ!
ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಾಗಿನ ಅರ್ಪಣೆ