ಉಡುಪಿ : ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಅಂತಾರೆ, ಆದರೆ ಇಂದಿನ ಮಕ್ಕಳು ಮೊಬೈಲ್ ಎಂಬ ಮಾಯಾ ಲೋಕದಲ್ಲಿ ಮುಳುಗಿ ತಮ್ಮ ಜೀವಕ್ಕೆ ಆಪತ್ತು ತಂದು ಕೊಡುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಉಡುಪಿಯಲ್ಲಿ ಮೊಬೈಲ್ ನೀಡದಿದ್ದಕ್ಕೆ ಮನನೊಂದು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ಒಬ್ಬ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಹೌದು ಮೊಬೈಲ್ ನೀಡದಿದ್ದಕ್ಕೆ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ನಿನ್ನೆ ಮನೆಯಿಂದ ಪ್ರಥಮೇಶ್ ಕಾಣೆಯಾಗಿದ್ದನು. ನಿರ್ಜನ ಪ್ರದೇಶದಲ್ಲಿರುವ ಬಾವಿಗೆ ಜಿಗಿದು ಪ್ರಥಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.