ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯಪಾಲರು ಪ್ರಾಜಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಸಿಎಂ ಡಿಕೆ ಸಿದ್ದರಾಮಯ್ಯ ಬೆನ್ನಿಗೆ ಕೇವಲ ಡಿಕೆಶಿ ಅಷ್ಟೆ ನಿಂತಿಲ್ಲ ಕಟ್ಟ ಕಡೆಯ ಕಾರ್ಯಕರ್ತರ ರಕ್ಷೆಯು ಇದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಕಾಂಗ್ರೆಸ್ ಪ್ರತಿಭಟನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರಿಂದ ಇಂದು ಪ್ರತಿಭಟನೆ ನಡೆಯುತ್ತಿದ್ದು, ಜನರಿಂದ ಜನರಿಗೋಸ್ಕರ ಬಂದ ಸರ್ಕಾರ ಇದು.ಈ ಸರ್ಕಾರಕ್ಕೆ ಪ್ರಮಾಣ ಬೋಧನೆ ಮಾಡಿದ್ದು ಇದೇ ಗವರ್ನರ್. ಈಗ ಯಾಕೆ ಒಳಸಂಚು ನಡೆಸುತ್ತಿದ್ದೀರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು
ನಿಮಗೆ ಯಾರಾದರೂ ತನಿಖೆ ಮಾಡಿ ವರದಿ ಕೊಟ್ಟಿದ್ದಾರಾ? ಯಾವುದಾದರೂ ಅಧಿಕಾರಿ ತನಿಖಾ ವರದಿ ಕೊಟ್ಟಿದ್ದಾರ? ಜನತಾದಳದ ಅಗ್ರಗನ್ಯ ನಾಯಕ ನವರಂಗಿ ನಕಲಿ ಸ್ವಾಮಿ, ಬರಿ ಬುರುಡೆ ಬಿಟ್ಟುಕೊಂಡು ಇರುವ ನವರಂಗಿ ನಕಲಿ ಸ್ವಾಮಿ, ಯಾಕೆ ನವರಂಗಿ ನಕಲಿ ಸ್ವಾಮಿಗೆ ಪ್ರಾಜಿಕ್ಯೂಷನ್ ಗೆ ಅನುಮತಿ ಕೊಡಲಿಲ್ಲ?ಲೋಕಾಯುಕ್ತ ವರದಿ ಇದ್ದರೂ ಏಕೆ ಪ್ರವಾಸಿ ಕ್ಯೂಷನ್ ಕೊಡಲಿಲ್ಲ? ಎಂದು ಆಕ್ರೋಶ ಹೊರಹಾಕಿದರು.
ಹತ್ತು ವರ್ಷ ಈ ಸರ್ಕಾರ ಬಲಿಷ್ಠವಾಗಿ ಇರುತ್ತೆ. ಈ ಸರ್ಕಾರವನ್ನು 10 ಜನ್ಮ ಎತ್ತಿ ಬಂದರೂ ಬೀಳಿಸಲು ಸಾಧ್ಯವಿಲ್ಲ. ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ. ಹೊಟ್ಟೆ ಉರಿ ಬಂದರೆ ಔಷದ ಕಳಿಸುತ್ತೇವೆ. ಡಾಕ್ಟರ್ ಇದ್ದಾರೆ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಕೇವಲ ಡಿಸಿಎಂ ಡಿಕೆ ಶಿವಕುಮಾರ್ ನಿಂತಿಲ್ಲ. ಕಟ್ಟ ಕಡೆಯ ಕಾರ್ಯಕರ್ತರ ರಕ್ಷಣೆ ಇದೆ ಪ್ರಾಜಿಕ್ಯೂಷನ್ ಧಿಕ್ಕರಿಸಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಇದೆ ವೇಳೆ ಕಾಂಗ್ರೆಸ್ ನ ಹಲವು ಸಚಿವರು, ಶಾಸಕರು, ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.