ಬೆಂಗಳೂರು: ವಿಪಕ್ಷಗಳು ಗ್ಯಾರಂಟಿಗೆ ವಿರುದ್ಧವಾಗಿರುವಂತ, ಪ್ರಧಾನ ಮಂತ್ರಿಗಳೇ ವಿರೋಧ ವ್ಯಕ್ತ ಪಡಿಸಿದ್ದರು. ಅಮಿತ್ ಶಾ ಕೂಡ ವಿರೋಧಿಸಿದ್ದರು. ನಾವು ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನುಡಿದಂತೆ ನಡೆಯುತ್ತಿದ್ದೇವೆ. ಆದರೇ ಬಿಜೆಪಿ-ಜೆಡಿಎಸ್ ಇದಕ್ಕೆ ವಿರೋಧಿಗಳಾಗಿದ್ದಾರೆ. ನನ್ನ ತೇಜೋವಧೆ ಸಾಧ್ಯವಿಲ್ಲ. ಈ ಪ್ರಯತ್ನ ಯಶಸ್ವಿಯಾಗಲ್ಲ. ಯಾಕೆಂದ್ರೆ ಈ ನಾಡಿನ ಜನತೆಯ ಆಶೀರ್ವಾದ ನನಗಿದೆ, ನಮ್ಮ ಪಕ್ಷಕ್ಕಿತೆ. ಈ ಕುಟಿಲ ಪ್ರಯತ್ನ ಭ್ರಮೆಯಾಗಿದೆ. ನಮ್ಮ ಸರ್ಕಾರ 7 ಕೋಟಿ ಕನ್ನಡಿಗರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವಂತದ್ದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಚಿವ ಸಂಪುಟ ಹಾಗೂ ಪಕ್ಷ ಸಾಲಿಡಾರಿಟಿಯನ್ನು ವ್ಯಕ್ತ ಪಡಿಸಿದೆ. ಹೈಕಮಾಂಡ್ ಕೂಡ ನನ್ನ ಜೊತೆಗೆ ಇರ್ತೇವೆ ಎಂದು ದೂರವಾಣಿ ಮೂಲಕ ಮಾತನಾಡಿದ್ದಾರೆ. ಅವರಿಗೆ, ಶಾಸಕ ಮಿತ್ರರಿಗೆ, ಕಾರ್ಯಕರ್ತರಿಗೆ ಎಲ್ಲಾ ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.
ರಾಜ್ಯಪಾಲರು ತೆಗೆದುಕೊಂಡಿರುವ ತೀರ್ಮಾನ, ನನ್ನನ್ನ ಪ್ರಾಸಿಕ್ಯೂಸ್ ಮಾಡಬೇಕು ಎಂದು ಮುಡಾ ಪ್ರಕರಣದಲ್ಲಿ ತೆಗೆದುಕೊಂಡಿರುವ ತೀರ್ಮಾನ ಕಾನೂನು ಬಾಹಿರ, ಅಸಂವಿಧಾನಿಕ ತೀರ್ಮಾನವಾಗಿದೆ. ಯಾವ ದೃಷ್ಠಿಕೋನದಿಂದ ಕೂಡ ಕಾನೂನು ಭಾಹಿರವಾಗಿದೆ. ಇದನ್ನು ಇಡೀ ಸಚಿವ ಸಂಪುಟ ತೀರ್ಮಾನಿಸಿದೆ. ಅದನ್ನು ಸಚಿವ ಸಂಪುಟ ಸಂಪೂರ್ಣವಾಗಿ ಅದನ್ನು ಖಂಡಿಸುತ್ತದೆ. ಇದಕ್ಕೆ ಯಾವುದೇ ಕಾನೂನಿನ ಬಲವಿಲ್ಲ. ಸಂವಿಧಾನದ ಬಲವಿಲ್ಲ ಎಂಬುದಾಗಿ ತೀರ್ಮಾನ ಮಾಡಿದೆ ಎಂದರು.
ರಾಜ್ಯಪಾಲರು ಈ ದೇಶದ ರಾಷ್ಟ್ರಾಧ್ಯಕ್ಷರ ಪ್ರತಿನಿಧಿಗಳು. ಅವರು ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ಕೆಲಸ ಮಾಡಬಾರದು. ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಅದನ್ನು ಈ ಪ್ರಕರಣದಲ್ಲಿ ಅವರು ಕಾನೂನು ರೀತಿ ನಡೆದುಕೊಳ್ಳದೇ ಇರುವುದರಿಂದ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಈ ನಡವಳಿಕೆಯನ್ನು ಸಚಿವ ಸಂಪುಟ ಅತ್ಯಂತ ತೀವ್ರವಾಗಿ ಖಂಡಿಸಿದೆ ಎಂದರು.
ಕೇಂದ್ರ ಸರ್ಕಾರ ಅನಗತ್ಯವಾಗಿ ಜನಗಳ ಆಶೀರ್ವಾದದಿಂದ ರಚನೆಯಾಗಿರುವಂತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳೋದಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಅವರ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ನಡೆದುಕೊಳ್ಳುತ್ತಿರುವುದರಿಂದ ಪ್ರಜಾಪ್ರಭುತ್ವ ಮೂಲ ಭೂತ ತತ್ವಕ್ಕೆ ಅಪಾಯವಾಗುತ್ತದೆ. ಫೆಡರಲ್ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ಅದರಿಂದ ಅವರ ನಡವಳಿಕೆ ಅವರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕಳುಹಿಸಿರುವಂತ ಎಸ್ಓಪಿಗಳಲ್ಲಿ ರಾಜ್ಯದ ಎಲ್ಲಾ ಚೀಫ್ ಸೆಕೆರೇಟರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಅದನ್ನು ನೋಡಿದಾಗ ಸ್ಪಷ್ಟವಾಗಿ ಗೊತ್ತಾಗುತ್ತದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವಂತ ಅನುಮತಿ ಕಾನೂನು ಬಾಹಿರವಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದುದ್ದರಿಂದ ಅವರು ನೀಡಿರುವಂತ ಅನುಮತಿ ಒಟ್ಟಾರೆ ಕಾನೂನು ಬಾಹಿರವಾಗಿದೆ. ಯಾವುದೇ ಪ್ರೊಸೀಜರ್ಸ್ ಪಾಲಿಸದೇ ಕೈಗೊಂಡ ನಿರ್ಧಾರವಾಗಿದೆ ಎಂದರು.
ರಾಜ್ಯಪಾಲರು ನೀಡಿರುವಂತ ಪ್ರಾಸೀಕ್ಯೂಷನ್ ವಿರುದ್ಧ ಕಾನೂನು ಹೋರಾಟ ಮಾಡಲಾಗುತ್ತದೆ. ಇದು ಪೂರ್ಣ ರಾಜಕೀಯ ದುರುದ್ದೇಶದಿಂದ ಮಾಡಿರುವಂತ ತೀರ್ಮಾನವಾಗಿದೆ. ನಾವು ಕೂಡ ಈ ರಾಜಕೀಯ ದುರುದ್ದೇಶದಿಂದ ಮಾಡಿರುವಂತ ಆದೇಶವನ್ನು, ನನ್ನ ಮೇಲೆ ರಾಜ್ಯಪಾಲರನ್ನು ಯಾಕೆ ಕೇಂದ್ರ ಸರ್ಕಾರ ಬಳಸಿಕೊಂಡು ಬಿಜೆಪಿ, ಜೆಡಿಎಸ್ ಮಾಡುತ್ತಿದೆ ಅಂದ್ರೆ ನಮ್ಮ ಸರ್ಕಾರ ಬಡವರ ಪರವಾಗಿರುವಂತ ಸರ್ಕಾರವಾಗಿರುವುದರಿಂದ ಎಂದರು.
ವಿಪಕ್ಷಗಳು ಗ್ಯಾರಂಟಿಗೆ ವಿರುದ್ಧವಾಗಿರುವಂತ, ಪ್ರಧಾನ ಮಂತ್ರಿಗಳೇ ವಿರೋಧ ವ್ಯಕ್ತ ಪಡಿಸಿದ್ದರು. ಅಮಿತ್ ಶಾ ಕೂಡ ವಿರೋಧಿಸಿದ್ದರು. ನಾವು ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನುಡಿದಂತೆ ನಡೆಯುತ್ತಿದ್ದೇವೆ. ಆದರೇ ಬಿಜೆಪಿ-ಜೆಡಿಎಸ್ ಇದಕ್ಕೆ ವಿರೋಧಿಗಳಾಗಿದ್ದಾರೆ. ನನ್ನ ತೇಜೋವಧೆ ಸಾಧ್ಯವಿಲ್ಲ. ಈ ಪ್ರಯತ್ನ ಯಶಸ್ವಿಯಾಗಲ್ಲ. ಯಾಕೆಂದ್ರೆ ಈ ನಾಡಿನ ಜನತೆಯ ಆಶೀರ್ವಾದ ನನಗಿದೆ, ನಮ್ಮ ಪಕ್ಷಕ್ಕಿತೆ. ಈ ಕುಟಿಲ ಪ್ರಯತ್ನ ಭ್ರಮೆಯಾಗಿದೆ. ನಮ್ಮ ಸರ್ಕಾರ 7 ಕೋಟಿ ಕನ್ನಡಿಗರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವಂತದ್ದು ಎಂದರು.
ಟಿಬಿ ಅಬ್ರಾಹಿಂ ನನ್ನ ವಿರುದ್ಧ 26-07-2024ರಂದು 11.30ಗೆ ನೀಡಲಾಗುತ್ತದೆ. ರಾತ್ರಿ 10 ಗಂಟೆಗೆ ಶೋಕಾಸ್ ನೋಟಿಸ್ ರೆಡಿಯಾಗುತ್ತದೆ. 23-11-2023ರಂದು ಲೋಕಾಯುಕ್ತದವರು ಕುಮಾರಸ್ವಾಮಿಯವರನ್ನು ಪ್ರಾಸಿಕ್ಯೂಟ್ ಮಾಡಬೇಕು ಎಂಬುದಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗುತ್ತದೆ. ಆದರೇ ಇವತ್ತಿನವರೆಗೆ ಅನುಮತಿಯನ್ನು ನೀಡಿಲ್ಲ. ಶಶಿಕಲಾ ಜೊಲ್ಲೆ ಅವರ ಮೇಲೆ ಅನುಮತಿ ಕೋರಿ ಮನವಿಯಿದೆ. ಅದನ್ನು ಮಾಡಿಲ್ಲ. 9-12-2021ರಂದು ಅವರ ವಿರುದ್ಧ ಲೋಕಾಯುಕ್ತ ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಿದ್ದಾರೆ. ಆದರೇ ಕೊಟ್ಟಿಲ್ಲ ಎಂದರು.
ಕುಮಾರಸ್ವಾಮಿ ಕೇಸಲ್ಲಿ ಲೂಟಿಯಲ್ಲಿ ಇವರ ಪಾತ್ರವಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಭೀತಾಗಿದೆ. ಹೀಗಾಗಿ ಅವರ ವಿರುದ್ಧದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿದ್ದರೂ ಈವರೆಗೆ ಅನುಮತಿ ನೀಡಿಲ್ಲ. ಆದರೇ ನನ್ನ ಮುಡಾ ಹಗರಣದಲ್ಲಿ ಪಾತ್ರವಿಲ್ಲ. ಯಾವುದೇ ದಾಖಲೆಯಿಲ್ಲ. ಆದರೂ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ಸ್ವತಂತ್ರ್ಯವಾಗಿ ನೀಡಿರುವಂತ ಅನುಮತಿಯಲ್ಲ ಎಂಬುದಾಗಿ ಕಿಡಿಕಾರಿದರು.
26-02-2024 ಮುರುಗೇಶ್ ನಿರಾಣಿಯವರು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಾಕ್ಷಿಗಳ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದಾರೆ. ಆದರೂ ಕೊಟ್ಟಿಲ್ಲ. 13-05-2024ರಂದು ಜನಾರ್ಧನರೆಡ್ಡಿ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆ ಮಾಡಿ, ಈ ತನಿಖೆಯಲ್ಲಿ ಸಾಭೀತಾಗಿದೆ ಎಂಬುದಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದರೂ ನೀಡಿಲ್ಲ. ಇಷ್ಟೆಲ್ಲ ಬಿಜೆಪಿಯವರ ಅಕ್ರಮಗಳಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ. ಆದರೇ ನನ್ನ ಕೇಸಲ್ಲಿ ಆತುರ ಆತುರವಾಗಿ ಅನುಮತಿ ನೀಡಿದ್ದಾರೆ ಎಂದು ಗುಡುಗಿದ್ದಾರೆ.
ಇದು ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದು ರಾಜಕೀಯ ಪ್ರೇರಿತ, ಅಸಂವಿಧಾನಿಕ. ಇವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಫಾಕ್ಸ್ ಕಾನ್ ನಿಂದ ರಾಜ್ಯದಲ್ಲಿ 2ನೇ ಬೃಹತ್ iPhone ತಯಾರಿಕಾ ಘಟಕ ಆರಂಭ: 40 ಸಾವಿರ ಉದ್ಯೋಗ ಸೃಷ್ಠಿ