ಕೊಪ್ಪಳ : ಕೊಚ್ಚಿ ಹೋಗಿದ್ದಂತ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ರಿಪೇರಿ ಕಾರ್ಯ ಆರಂಭಗೊಂಡಿತ್ತು. ಮೊನ್ನೆ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ವಿಫಲವಾಗಿತ್ತು. ಸತತ ಎರಡು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19 ಬದಲಿಗೆ ಇದೀಗ ಸ್ಟಾಪ್ ಲಾಗ್ ಗೇಟ್ ನ ಮೂರನೇ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ.
ಹೌದು ನಿನ್ನೆ ಮೊದಲ ಹಂತದ ಎಲಿಮೆಂಟ್ ಅಳವಡಿಕೆಯಲ್ಲಿ ತಂತ್ರಜ್ಞರು ತುಂಗಭದ್ರಾ ಡ್ಯಾಂನ 19ನೇ ಗೇಟ್ ನಲ್ಲಿ ತೊಡಗಿದ್ದರು. ಅದು ಯಶಸ್ವಿಯಾಗಿದ್ದು, ಇಂದು ಕೂಡ ಮೂರನೇ ಎಲಿಮೆಂಟ್ ಅಳವಡಿಸಿಲು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಇಂದು ಮೂರನೇ ಎಲಿಮೆಂಟ್ ಯಶಸ್ವಿಯಾಗಿ ಅಳವಡಿಸಿದ ಸಿಬ್ಬಂದಿಗಳು, ನೀರು ಹರಿಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂರನೇ ಎಲಿಮೆಂಟ್ ಅಳವಡಿಕೆ ಮೂಲಕ ನೀರು ಹರಿಯುವುದನ್ನು ತಡೆಯಲಾಗಿದೆ.ಜಲಾಶಯದಿಂದ ನೀರು ಹರಿಯುವುದನ್ನು ತಡೆಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಒಟ್ಟಾರೆಯಾಗಿ ಇಂದು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19 ಬದಲಿಗೆ ಸ್ಟಾಪ್ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದ್ದರಿಂದ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಹೆಚ್ಚಾಗಿ ರೈತರು ನಿಟ್ಟುಸಿರುಬಿಡುವಂತಾಗಿದೆ. ಆಗಸ್ಟ್ 10 ರಿಂದ ನಿರಂತರವಾಗಿ ನೀರು ಹರಿದು ಹೋಗಿತ್ತು.