ಕಲಬುರ್ಗಿ : ಪತ್ನಿ ತವರು ಸೇರಿದ್ದಕ್ಕೆ ಮನನೊಂದ ಪತಿಯೊಬ್ಬ ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪತ್ತೆಪುರ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಮಹೇಶ್ ನಾಗೇಂದ್ರಕರ್ (27) ಎಂದು ತಿಳಿದುಬಂದಿದೆ.
ಈತ ಬೀದರ್ ಜಿಲ್ಲೆಯ ಮನ್ನಾಖೆಳಿಯ ರೇಕುಳಗಿ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ.ಪತ್ನಿ ತವರು ಸೇರಿದ್ದಕ್ಕೆ ಮಹೇಶ್ ಬಹಳ ನೊಂದುಕೊಂಡಿದ್ದ. ಮಾನಸಿಕವಾಗಿ ಮನನೊಂದು ಡೀಸೆಲ್ ಸುಳೆದುಕೊಂಡು ಮಹೇಶ್ ಬೆಂಕಿ ಹಚ್ಚಿಕೊಂಡಿದ್ದಾನೆ.ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.