ಉತ್ತರಕನ್ನಡ : ಕಾರವಾರದ ಕೋಡಿಭಾಗ್ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ ಕುಸಿದು ಬಿದ್ದಿದೆ. ಈ ಹಿನ್ನೆಲೆ ಹೊಸ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದೀಗ ಅಂಕೋಲಾ ಕಾರ್ವಾರ್ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಹೊಸ ಸೇತುವೆ ಸೇಫ್ ಅಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳಿ ನದಿ ಬಳಿ ಇರುವ ನೂತನ ಸೇತುವೆ ಸೇಫ್ ಅಲ್ಲ. ಹೊಸ ಸೇತುವೆ ಸೇಫ್ ಅಲ್ಲ ಅಂತ ಈ ಹಿಂದೆ ಪ್ರತಿಭಟನೆ ಮಾಡಿದ್ದೆ. ಆದರೆ ಸ್ಥಳೀಯರು ಅದಕ್ಕೆ ರಾಜಕೀಯ ತಿರುವು ಕೊಟ್ಟಿದ್ದರು. ರಾಜಕೀಯ ಮಾಡಿದ್ದಕ್ಕೆ ಬೇಸರಗೊಂಡು ಪ್ರತಿಭಟನೆಯನ್ನು ಕೈ ಬಿಟ್ಟಿದ್ದೆ.
ಈಗ ಆ ಸೇತುವೆ ಬಿರುಕು ಬಿಟ್ಟಿರುವ ಫೋಟೋ ಹರಿದಾಡುತ್ತಿದೆ.ವಾರದ ಹಿಂದೆ ಹಳೆಯ ಸೇತುವೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳು ಒಂದೇ ಕ್ಷೇತ್ರದ ಮೇಲೆ ಸಂಚರಿಸುತ್ತವೆ. ಸಂಬಂಧಪಟ್ಟವರು ಆದಷ್ಟು ಬೇಗ ಮುನ್ನೆಚ್ಚರಿಕೆಯನ್ನು ವಹಿಸಬೇಕು ಕೂಡಲೇ ಎಚ್ಚೆತ್ತುಕೊಂಡು ಐnಆರ್ ಬಿ ಯವರು ಕೆಲಸ ಮಾಡಬೇಕಿದೆ ಎಂದು ಶಿರೂರಿನಲ್ಲಿ ಕಾರವಾರ ಅಂಕೋಲ ಶಾಸಕ ಸತೀಶ್ ಸೈಲ್ ಹೇಳಿಕೆ ನೀಡಿದರು.