ವಿಜಯಪುರ : ಅತಿ ವೇಗದಿಂದ ಕಾರು ಚಾಲನೆ ಮಾಡಿದ ಹಿನ್ನೆಲೆಯಲ್ಲಿ 1,000 ದಂಡ ಕಟ್ಟುವ ವಿಚಾರವಾಗಿ ಟ್ರಾಫಿಕ್ ಪಿಎಸ್ಐ ಒಬ್ಬರು ಕಾರು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರ ನಗರದ ಬೇಗಂ ಕಲಾಬ್ ಪ್ರವೇಶ ದ್ವಾರದ ಬಳಿ ನಿನ್ನೆ ನಡೆದಿದೆ.
ಹೌದು ವಿಜಯಪುರದಲ್ಲಿ ಕಾರು ಚಾಲಕನ ಮೇಲೆ ಟ್ರಾಫಿಕ್ ಪಿಎಸ್ಐ ಹಲ್ಲೆ ನಡೆಸಿದ್ದಾರೆ. ಬೇಗಂ ತಲಾಬ್ ಪ್ರವೇಶದ್ವಾರದ ಬಳಿ ಈ ಒಂದು ಘಟನೆ ನಿನ್ನೆ ನಡೆದಿದೆ. ಕಾರು ಚಾಲಕನ ಮೇಲೆ ಟ್ರಾಫಿಕ್ ಪಿಎಸ್ಐ ಅವಾಚ್ಯವಾಗಿ ನಿಂದಿಸಿದಲ್ಲದೆ ಹಲ್ಲೆ ಮಾಡಿದ್ದಾರೆ. ಕಾರು ಚಾಲಕನ ಮೇಲೆ ಪಿಎಸ್ಐ ನಿಖಿಲ್ ಕಾಂಬಳೆ ಹಲ್ಲೆ ಮಾಡಿದ್ದಾರೆ.
ಅತಿ ವೇಗದ ಚಾಲನೆ ಹಿನ್ನೆಲೆಯಲ್ಲಿ ಕಾರನ್ನು ತಡೆಯಲಾಗಿತ್ತು. ಹಾಗಾಗಿ ಒಂದು ಸಾವಿರ ದಂಡ ಕಟ್ಟುವ ವಿಚಾರವಾಗಿ ಗಲಾಟೆ ನಡೆದಿದೆ. ಟ್ರಾಫಿಕ್ ಪಿಎಸ್ಐ ಹಾಗೂ ಕಾರು ಚಾಲಕನ ಮಧ್ಯ ಕಿರಿಕ್ ಆಗಿದೆ. ಆಗ ಯಾಕೆ ಗುಂಡಾಗಿರಿ ಮಾಡುತ್ತೀರಿ ಅಂದಿದ್ದಕ್ಕೆ ಈ ವೇಳೆ ಸಿನಿಮಾ ಸ್ಟೈಲ್ ನಲ್ಲಿ ಟ್ರಾಫಿಕ್ ಪಿಎಸ್ಐ ಹಲ್ಲೆ ಮಾಡಿದ್ದಾರೆ. ಇದೀಗ ಪಿಎಸ್ಐ ಕಾರು ಚಾಲಕನ ಮೇಲೆ ಹಲ್ಲೆ ಮಾಡುವ ದೃಶ್ಯ ವೈರಲ್ ಆಗಿದೆ.