ಬೆಂಗಳೂರು : ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಮುಕರಿಂದ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮಹಿಳೆಯರು ಹಗಲು ಹೊತ್ತಿನಲ್ಲಿ ಕೂಡ ಭಯದಿಂದ ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಇದೀಗ ಸಿನಿಮಾ ನೋಡಲು ಬಂದಿದ್ದ ಯುವತಿಗೆ ಕಾಮುಕನೊಬ್ಬ ಕಾಟ ನೀಡಿದ್ದು, ಶೌಚಾಲಯಕ್ಕೆ ತೆರಳಿದಾಗ ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿನಿಮಾ ನೋಡಲು ಬಂದಿದ್ದ ಯುವತಿಗೆ ಕಾಮುಕನೊಬ್ಬ ಕಾಟ ಕೊಟ್ಟಿದ್ದಾನೆ. ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಮಹಿಳೆಯರ ಹೌಚಾಲಯದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಆಗಸ್ಟ್ 10 ರಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ 9:30 ಶೋ ಬಳಿಕ ಇಂಟರ್ವಲ್ ನಲ್ಲಿ ಈ ಒಂದು ಕೃತ್ಯ ನಡೆದಿದೆ. ಶೌಚಾಲಯ ಕಿಟಕಿಯ ಮೇಲೆ ಮೊಬೈಲ್ ಇಟ್ಟು ಕಾಮುಕ ಮಹಿಳೆಯರ ರೆಕಾರ್ಡ್ ಮಾಡಿದ್ದಾನೆ. ಈ ಕುರಿತು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಇದೀಗ ಯುವತಿಯ ದೂರಿನ ಅನ್ವಯ ಪೊಲೀಸರು ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.