ಕೋಲಾರ : ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಚಾಕುವಿನಿಂದ ಇರಿದು ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಕೋಮ್ಮನಹಳ್ಳಿಯಲ್ಲಿ ನಡೆದಿದೆ.
ಹೌದು ಚಾಕುವಿನಿಂದ ಇರಿದು ದಿವ್ಯ (22) ಳನ್ನು ಭರತ್ (25) ಕೊಲೆ ಮಾಡಿದ್ದಾನೆ. ಕೋಮ್ಮನಹಳ್ಳಿಯ ನಿವಾಸಿಯಾಗಿದ್ದ ಭರತ್ ಟಿಪ್ಪರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿಯನ್ನು ಕೊಲೆ ಮಾಡಿ ಭರತ್ ಪರಾರಿಯಾಗಿದ್ದ ಸದ್ಯ ಪೊಲೀಸರು ಭರತ್ ನನ್ನು ಬಂಧಿಸಿದ್ದಾರೆ.ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.