ಬೆಂಗಳೂರು : ಹಬ್ಬಕ್ಕೆಂದು ತಾವರೆ ಹೂವು ತರಲು ತೆರಳಿದ್ದ ವ್ಯಕ್ತಿ ಒಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊಸ ಹಳ್ಳಿ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನಲ್ಲಿ ಈ ಒಂದು ಘಟನೆ ನಡೆದಿದ್ದು, ಹೂ ಕೀಳಲು ಹೋಗಿ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗೋವಿನ ಹಳ್ಳಿಯ ಸಿದ್ದಲಿಂಗಯ್ಯ (45) ದುರ್ಮರಣ ಹೊಂದಿದ್ದಾರೆ.
ಹಬ್ಬಕ್ಕೆಂದು ತಾವರೆ ಹೂವು ತರಲು ಕೆರೆಗೆ ಹೋಗಿದ್ದಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಈ ವೇಳೆ ಕೆರೆಯಲ್ಲಿ ಮುಳುಗಿ ಸಿದ್ದಲಿಂಗಯ್ಯ ಸಾವನಪ್ಪಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಹೊರಗಡೆ ತೆಗೆದಿದ್ದಾರೆ.ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.