ಹಾವೇರಿ : ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಗಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಸೋರಿಕೆ ಆದ ಆಕ್ಸೀಜನ್ ಸಿಲಿಂಡರ್ ಸರಿಪಡಿಸಿದ್ದಾರೆ.ಹೀಗಾಗಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಆಕ್ಸಿಜನ್ ಸೋರಿಕೆಯ ವಾಸನೆ ಬರುತ್ತಿದ್ದಂತೆ ಗಾಬರಿಗೊಂಡ ಗರ್ಭಿಣಿ ಮಹಿಳೆಯರು ಮತ್ತು ರೋಗಿಗಳು ಹಾಗೂ ಸಂಬಂಧಿಕರು ಹೊರಗೆ ಓಡಿ ಬಂದಿದ್ದಾರೆ. ಈ ಮಧ್ಯ ಅಡುಗೆ ಅನಿಲ ಸೋರಿಕೆ ಆಗಿದೆ ಎಂದು ಸುದ್ದಿ ಹರಡಿ ಪರಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಎದ್ದೋ, ಬಿದ್ದೋ ಎಂದು ಗರ್ಭಿಣಿಯರು, ಬಾಣತಿಯರು, ಮಕ್ಕಳು ಕರೆದುಕೊಂಡು ಹೊರಗೆ ಓಡಿ ಹೋಗಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗೆ ಆಕ್ಸಿಜನ್ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ಕೂಡಲೇ ಸೋರಿಕೆ ಆದ ಆಕ್ಸೀಜನ್ ಸಿಲಿಂಡರ್ ಸರಿಪಡಿಸಿದ್ದಾರೆ. ನಂತರ ಆಸ್ಪತ್ರೆಯಲ್ಲಿ ಆತಂಕ ಕಡಿಮೆಯಾಗಿದೆ. ಆಸ್ಪತ್ರೆತ ಸಿಬ್ಬಂದಿ ಸೋರಿಕೆಯಾಗಿದ್ದು ಅಡುಗೆ ಅನಿಲ ಅಲ್ಲ ಎಂದು ಸ್ಪಷ್ಟಪಡಿಸಿದ ನಂತರ ರೋಗಿಗಳು ಸಂಬಂಧಿಕರು ವಾರ್ಡ ಒಳಗೆ ಹೋಗಿದ್ದಾರೆ.