ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೊಂಡು ವರ್ಷಗಳೇ ಉರುಳುತ್ತಿವೆ. ಈ ಗ್ಯಾರಂಟಿ ಯೋಜನೆಗಳಿಗೆ ತಗಲುತ್ತಿರುವಂತ ವೆಚ್ಚವನ್ನು ಕಂಡು ಸರ್ಕಾರವೇ ಬೆಚ್ಚಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಗ್ಯಾರಂಟಿ ಸ್ಕೀಂಗಳನ್ನು ಪರಿಷ್ಕರಣೆ ಮಾಡಬೇಕು. ಜೊತೆಗೆ ಇನ್ನಷ್ಟು ಷರತ್ತುಗಳನ್ನು ವಿಧಿಸಬೇಕು ಎಂಬ ಕೂಗು ಎದ್ದಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವನಿಧಿ ಹಾಗೂ ಶಕ್ತಿ ಯೋಜನೆಗೆ ಕಳೆದ 8 ತಿಂಗಳಿನಿಂದ ಕೋಟಿ ಕೋಟಿ ಖರ್ಚಾಗಿದೆಯಂತೆ. ಕಳೆದ 8 ತಿಂಗಳು ಗ್ಯಾರಂಟಿ ಯೋಜನೆಗಳಿಗೆ ಆಗಿರುವಂತ ಖರ್ಚು ನೋಡಿದಂತ ಸರ್ಕಾರ, ಪುಲ್ ಶಾಕ್ ಗೆ ಒಳಗಾಗಿದೆ ಎನ್ನಲಾಗುತ್ತಿದೆ.
ಈ ನಡುವೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಗ್ಯಾರಂಟಿ ಸ್ಕೀಂಗಳನ್ನು ಜಾರಿಗೊಳಿಸಿರುವುದೇ ಬಡವರು, ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಆಗಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಮುಂದುವರೆಯಲಿದೆ ಎಂಬುದಾಗಿ ಪದೇ ಪದೇ ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೇ ಗೃಹ ಲಕ್ಷ್ಮೀ ಯೋಜನೆಗೆ ಪ್ರತಿ ತಿಂಗಳು ಕೋಟ್ಯಂತರ ರೂ ಖರ್ಚಾಗುತ್ತಿದೆಯಂತೆ. ಗೃಹ ಜ್ಯೋತಿಯ ಪ್ರಯೋಜನವನ್ನು ರಾಜ್ಯದಲ್ಲಿ 1 ಕೋಟಿ 29 ಸಾವಿರ ಮಂದಿ ಪಡೆದಿದ್ದಾರೆ.
ಇನ್ನೂ ಅನ್ನಭಾಗ್ಯ ಯೋಜನೆಯಡಿ 4 ಕೋಟಿ 37 ಲಕ್ಷ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯ ಅಡಿಯಲ್ಲಿ ದಿನ ನಿತ್ಯ 62 ರಿಂದ 64 ಲಕ್ಷ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇಲ್ಲಿಯವರೆಗೆ ಶಕ್ತಿ ಯೋಜನೆಯಡಿ ಪ್ರಯಾಣಿಸಿದವರ ಸಂಖ್ಯೆ ಬರೋಬ್ಬರಿ 225 ಕೋಟಿ ಮಹಿಳೆಯರು ಆಗಿದ್ದಾರೆ.
ಯುವನಿಧಿ ಯೋಜನೆಗೆ 5 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಲಾಭವನ್ನು ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಪ್ರತಿ ತಿಂಗಳು ಖರ್ಚಾಗುತ್ತಿರುವ ಹಣ ಅಂದಾಜು 5 ಸಾವಿರ ಕೋಟಿ ಎನ್ನಲಾಗುತ್ತಿದೆ. ಹೀಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಬೇಕು. ಷರತ್ತುಗಳನ್ನು ವಿಧಿಸಬೇಕು ಎಂಬ ಕೂಗು ಕಾಂಗ್ರೆಸ್ ಸರ್ಕಾರದ ಪಾಳೆಯದಲ್ಲಿ ಎದ್ದಿದೆ.
ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಮತ್ತೆ ಪರಿಷ್ಕರಣೆಗೆ ಮುಂದಾಗಿದೆ. ಸೇವೆ, ಸೌಲಭ್ಯಗಳನ್ನು ಪಡೆಯಲು ಫಲಾನುಭವಿಗಳಿಗೆ ಮತ್ತಷ್ಟು ಷರತ್ತುಗಳನ್ನು ನಿಗದಿ ಪಡಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ಖಚಿತ ಮಾಹಿತಿ ಸರ್ಕಾರದಿಂದ ಹೊರಬೀಳಬೇಕಿದೆ.
‘ನಟಿ ಕಂಗನಾ ರನೌತ್’ ಅಭಿನಯದ ‘ಎಮರ್ಜೆನ್ಸಿ’ ಸಿನಿಮಾದ ಟ್ರೈಲರ್ ರಿಲೀಸ್ | Emergency Trailer Out
ರಾಜ್ಯದ ರೈತರಿಗೆ ಗುಡ್ ನ್ಯೂಸ್ ; ಸೆಪ್ಟೆಂಬರ್ ನಿಂದ ‘ಪೋಡಿ’ ಅಭಿಯಾನಕ್ಕೆ ಚಾಲನೆ
ರಾಜ್ಯದ ರೈತರೇ ಗಮನಿಸಿ : ‘PM KISAN’ ಹಣ ಜಮಾ ಆಗಲು ಕೂಡಲೇ `e-KYC’ ಮಾಡಿಸಿಕೊಳ್ಳಿ!