ವಿಜಯಪುರ : ಹಿಂದೂ ಧರ್ಮ ಲಿಂಗಾಯತ ಧರ್ಮ ಒಂದೇ ನಾವೆಲ್ಲರೂ ಹಿಂದೂಗಳೇ. ಹಿಂದೂ ಎಂಬುವುದು ಮಹಾಸಾಗರ. ಬೌದ್ಧ ಜೈನ್ ಸಿಖ್ ಲಿಂಗಾಯತ ವೈಷ್ಣವ ಎಂಬ ನದಿಗಳಿವೆ. ಅನೇಕ ನದಿಗಳು ಹಿಂದೂ ಎಂಬ ಮಹಾಸಾಗರದಲ್ಲಿ ವಿಲೀನವಾಗಿವೆ ಎಂದು ಹರಿಹರದ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದರು.
ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಮಾತನಾಡಿದ ಅವರು, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಗುರುನಾನಕರು, ಜ್ಞಾನೇಶ್ವರರು, ಬಸವಣ್ಣನವರು ಆಯಾ ಕಾಲಘಟ್ಟದಲ್ಲಿ ಅವರವರ ವಿಚಾರಧಾರೆಗಳನ್ನು ಅವರು ಹೇಳಿದರು. ಆ ವಿಚಾರಧಾರೆಗಳೆ ಧರ್ಮಗಳಾದವು ಎಂದು ಹೇಳಿದರು.
ರಾಜ್ಯದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು. ಜಗಜ್ಯೋತಿ ಬಸವೇಶ್ವರರ ವಿಚಾರಧಾರೆಯನ್ನು ಸೀಮಿತ ಮಾಡಬಾರದು.ಯಾವುದೇ ಮಹಾಪುರುಷರ ಅನುಕರಣೆ ಮಾಡುವವರನ್ನು ಟೀಕಿಸಬಾರದು.ನಾವೇ ಶ್ರೇಷ್ಠವೆಂದು ಟೀಕಿಸಬಾರದೆಂದು ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದರು.
ಒಂದು ಧರ್ಮದ ಆಚರಣೆಗಳನ್ನು ಕೀಳಾಗಿ ಕಾಣುವುದು ಒಳಿತಲ್ಲ ಮತ್ತೊಂದು ತತ್ವಗಳನ್ನು ಸ್ವಚ್ಛವಾಗಿ ಕಾಣಬಾರದು ಎಲ್ಲವೂ ಒಂದೇ ಹಿಂದೂ ಧರ್ಮ ಲಿಂಗಾಯತ ಧರ್ಮ ಎರಡು ಒಂದೇ ಎಂದು ವಿಜಯಪುರದ ಜ್ಞಾನ ಯೋಗಶ್ರಮದಲ್ಲಿ ವಚನಾನಂದ ಸ್ವಾಮೀಜಿ ಸ್ಪಷ್ಟಣೆ ನೀಡಿದರು.