ಕೊಪ್ಪಳ : ತುಂಗಾಭದ್ರಾ ಡ್ಯಾಂನಿಂದ ಬೆಳಗ್ಗೆ 7 ಗಂಟೆವರೆಗೆ 1.5 ಲಕ್ಷ ಕ್ಯೂಸಕ್ ನೀರು ಬಿಡುಗಡೆ ಮಾಡಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಇಂದು ಬೆಳಗ್ಗೆ 7 ಗಂಟೆಯವರೆಗೆ ಟಿಬಿ ಡ್ಯಾಂನಿಂದ 1.5 ಲಕ್ಷ ಕ್ಯೂಸೆಕ್ ನೀರು ಹರಿಬಿಡಿಲಾಗಿದ್ದು, ಇಷ್ಟು ನೀರು ಬಿಟ್ರೆ ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆ ಆಗಲಿದೆ. ಅಷ್ಟೇ ಅಲ್ಲದೇ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.
ನಾಲ್ಕು ಜಿಲ್ಲೆಗಳ ಗ್ರಾಮಗಳ ಜನರಿಗೆ ಆತಂಕ ಶುರುವಾಗಿದ್ದು, ತುಂಗಾಭದ್ರ ನದಿ ಬಳಿ ಯಾರೂ ಹೋಗದಂತೆ ಡಂಗೂರ ಸಾರಲಾಗಿದೆ.