ಬೆಂಗಳೂರು: ಅವರಿಬ್ಬರದ್ದು ಕಾಲೇಜು ದಿನಗಳಿಂದ ಪ್ರೀತಿ. ಕೊನೆಗೂ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಂತ ಆ ಇಬ್ಬರು, ಜೀವನ ನಿರ್ವಹಣೆಗಾಗಿ ಮಹಾನಗರಿ ಬೆಂಗಳೂರಿಗೆ ಬಂದಿದ್ದರು. ಆದ್ರೇ ಅವಳಿಗಾಗಿ ಮನೆ ಬಿಟ್ಟು ಬದಿದ್ದಂತ ಆತ, ಕೊನೆಗೆ ಅವಳಿಂದಲೇ ಜೀವವನ್ನು ಬಿಟ್ಟಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅಂತ ಮುಂದೆ ಓದಿ.
ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಇಬ್ಬರು ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಪ್ರೀತಿಸಿದ್ದಂತ ಆ ಇಬ್ಬರು ಮದುವೆಯಾದ ಬಳಿಕ ಜೀವನ ಕಟ್ಟಿಕೊಳ್ಳೋದಕ್ಕೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ವೈಟ್ ಫೀಲ್ಡ್ ವ್ಯಾಪ್ತಿಯ ಹಗದೂರಿನಲ್ಲಿ ವಾಸಿಸುತ್ತಿದ್ದರು. ಮಹೇಶ್ ಆಟೋ ಓಡಿಸುತ್ತಿದ್ದರೇ, ಪತ್ನಿ ತೇಜಸ್ವಿನಿ ಫೈನಾನ್ಸ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ದಾಂಪತ್ಯ 12 ವರ್ಷಕ್ಕೆ ಕಾಲಿಟ್ಟಿತ್ತು.
ಇದೇ ಸಂದರ್ಭದಲ್ಲಿ ತೇಜಸ್ವಿನಿ ಮೇಲೆ ಅದೇ ಕಂಪನಿಯಲ್ಲಿ ಗಜೇಂದ್ರ ಎಂಬಾತನ ಕಣ್ಣು ಬಿದ್ದಿದೆ. ಇಬ್ಬರ ಸಲುಗೆ ಹೆಚ್ಚಾಗಿದೆ. ಈ ವಿಷಯ ಮಹೇಶ್ ಗೆ ತಿಳಿದಿದ್ದೇ ತಡ ಕೆಂಡಾಮಂಡಲವಾಗಿ, ಬುದ್ಧಿವಾದ ಹೇಳಿದ್ದಾರೆ. ಆಗ ಗಲಾಟೆ ಕೂಡ ಆಗಿದೆ. ಈ ಗಲಾಟೆಯ ಕಾರಣಕ್ಕೆ ತೇಜಸ್ವಿನಿ ಮನೆಯನ್ನೇ ಬಿಟ್ಟು ಹೋಗಿದ್ದಳಂತೆ. ಇದು ಗಜೇಂದ್ರ ಹಾಗೂ ತೇಜಸ್ವಿನಿ ಮೇಲೆ ಮತ್ತಷ್ಟು ಅನುಮಾನ ಮೂಡುವುದಕ್ಕೆ ಕಾರಣವಾಗಿದೆ. ಆ ಬಳಿಕ ಮತ್ತೆ ವಾಪಾಸ್ ಆಗಿದ್ದಾಳೆ.
ಶುಕ್ರವಾರದಂದು ನಾಗರಪಂಚಮಿಯ ದಿನ ಮಹೇಶ್ ಐದು ಗಂಟೆಗೆ ಆಟೋ ಓಡಿಸೋದಕ್ಕೆ ಮನೆಯಿಂದ ಹೊರ ಹೋಗಿದ್ದಾನೆ. ಇದೇ ಸಂದರ್ಭ ನೋಡಿ ಗಜೇಂದ್ರನನ್ನು ತೇಜಸ್ವಿನಿ ಮನೆಗೆ ಕರೆಸಿಕೊಂಡಿದ್ದಾರೆ. ಮರಳಿ ಮಧ್ಯಾಹ್ನ ಮಹೇಶ್ ಮನೆಗೆ ಬಂದವನಿಗೆ ತೇಜಸ್ವಿನಿ-ಗಜೇಂದ್ರ ರೆಡ್ ಹ್ಯಾಂಡ್ ಆಗೇ ಸಿಕ್ಕಿ ಬಿದ್ದಿದ್ದಾರೆ. ಆಗ ಗಲಾಟೆ ಮಾಡಿದಾಗ ಗಲಾಟೆ ತಾರಕಕ್ಕೆ ತೆರಳಿದೆ. ತೇಜಸ್ವಿನಿ ಪ್ರಿಯಕರ ಗಜೇಂದ್ರನ ಜೊತೆ ಸೇರಿ ಜಾರ್ಜರ್ ವಯರ್ ನಿಂದ ಮಹೇಶ್ ಕುತ್ತಿಗೆ ಬಿಗಿದು ಸಾಯಿಸಿಯೇ ಬಿಟ್ಟಿದ್ದಾರೆ.
ಅಕ್ಕಪಕ್ಕದವರು ಗಲಾಟೆ ಜಾಸ್ತಿ ಆದಾಗ ಮನೆಗೆ ಬಂದು ನೋಡಿದಾಗ ಮಹೇಶ್ ಕುಸಿದು ಬಿದ್ದಿದ್ದು ಕಂಡು ಏನಾಗಿದೆ ಅಂತ ಪ್ರಶ್ನಿಸಿದ್ದಾರೆ. ಗಲಾಟೆ ವೇಳೆ ತಳ್ಳಿದೆ. ಮೂರ್ಛೆ ಬಿದ್ದಿದ್ದಾನೆ ಅಂತ ಸುಳ್ಳು ಹೇಳಿದ್ದಾಳೆ. ಹಾಗಾದ್ರೇ ಇವರು ಯಾರು ಅಂತ ಗಜೇಂದ್ರನ ಬಗ್ಗೆ ವಿಚಾರಿಸಿದಾಗ ಮಾವ ಅಂತ ಸುಳ್ಳು ಹೇಳಿದ್ದಾಳೆ.
ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರ ಎಂಟ್ರಿಯಾಗಿದೆ. ಮಹೇಶ್ ಕುತ್ತಿಗೆಯಲ್ಲಿ ಕಂಡ ಗಾಯದ ಗುರುತಿನ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಪೊಲೀಸ್ ವರಸೆಯಲ್ಲಿ ವಿಚಾರಣೆ ನಡೆಸಿದಾಗ ತೇಜಸ್ವಿನಿ ಹಾಗೂ ಗಜೇಂದ್ರ ಸೇರಿಕೊಂಡು ಮಹೇಶ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರನ್ನು ಜೈಲಿಗಟ್ಟಿದ್ದಾರೆ.
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್: ಡಿಕೆಶಿ ವಿರುದ್ಧ ಆರ್.ಅಶೋಕ್ ಹಿಗ್ಗಾಮುಗ್ಗಾ ವಾಗ್ಧಾಳಿ