ಬೆಳಗಾವಿ: ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧವೇ ಸಿಡಿದೆದ್ದಿದ್ದಂತ ರೆಬಲ್ ನಾಯಕರು, ರಹಸ್ಯ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲೇ ಮೈಸೂರು ಚಲೋಗೆ ಸೆಡ್ಡು ಹೊಡೆದು ಬಳ್ಳಾರಿ ಪಾದಯಾತ್ರೆಯನ್ನು ಸೆಪ್ಟೆಂಬರ್.17ರಂದು ನಡೆಸುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬೆಳಗಾವಿಯ ಜಾಂಬೋಟಿ ರೆಸ್ತೆಯಲ್ಲಿರುವಂತ ರೆಸಾರ್ಡ್ ಒಂದರಲ್ಲಿ ಬಿಜೆಪಿಯ ರೆಬಲ್ ನಾಯಕರು ರಹಸ್ಯ ಸಭೆಯನ್ನು ನಡೆಸಲಿದ್ದಾರೆ ಎನ್ನಲಾಗಿದೆ.
ರೆಸಾರ್ಟ್ ನಲ್ಲಿ ನಡೆದಂತ ರಹಸ್ಯ ಸಭೆಯಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್.ಆರ್ ಸಂತೋಷ್ ಕೂಡ ಭಾಗಿಯಾಗಿದ್ದು ತೀವ್ರ ಕುತೂಹಲವನ್ನು ಮೂಡಿಸಿತ್ತು.
ಅಂದಹಾಗೇ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಸಿಡಿದೆದ್ದಿದ್ದರು. ಈಗ ಇಬ್ಬರು ನಾಯಕರ ಜೊತೆಗೆ ಹಲವು ಅಸಮಾಧಾನಿತ ಬಿಜೆಪಿ ನಯಾಕರು ಇವರೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯ ಜಾಂಬೋಟಿ ಬಳಿಯ ರೆಸಾರ್ಟ್ ನಲ್ಲಿ ನಡೆದಂತ ಬಿಜೆಪಿ ಅಸಮಾಧಾನಿತರ ರಹಸ್ಯ ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಕುಮಾರ್ ಬಂಗಾರಪ್ಪ, ಜಿಎಂ ಸಿದ್ದೇಶ್ ಸೇರಿದಂತೆ ವಿವಿಧ ಹತ್ತಕ್ಕೂ ಹೆಚ್ಚು ರೆಬಲ್ ನಾಯಕರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.
ಈ ರಹಸ್ಯ ಸಭೆಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಮೈಸೂರು ಚಲೋ ಪಾದಯಾತ್ರೆಗೆ ಸೆಡ್ಡು ಹೊಡೆದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, ಎಸ್ಸಿ, ಎಸ್ಟಿ ಅನುದಾನ ಬಳಕೆಯಲ್ಲಿನ ಅಕ್ರಮ ಖಂಡಿಸಿ ಸೆಪ್ಟೆಂಬರ್.17ರಂದು ಬಳ್ಳಾರಿ ಪಾದಯಾತ್ರೆಯನ್ನು ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಅಂತ ಇನ್ ಸೈಟ್ ಮಾಹಿತಿಯಿಂದ ತಿಳಿದು ಬಂದಿದೆ.
ಸೆಪ್ಟೆಂಬರ್.17ರಂದು ಕೂಡಲಸಂಗಮದಿಂದ ಬಳ್ಳಾರಿಯವರೆಗೆ ವಾಲ್ಮೀಕಿ ಹಗರಣ, ಎಸ್ಸಿ ಎಸ್ಟಿ ಹಗರಣವನ್ನು ಖಂಡಿಸಿ ರೆಬಲ್ ನಾಯಕರು ಪಾದಯಾತ್ರೆಯನ್ನು ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ತಿಳಿದು ಬರಬೇಕಿದೆ.
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
ಅಮೆರಿಕದ ಜಿಮ್ನಾಸ್ಟ್ ಜೋರ್ಡಾನ್ ಚಿಲಿಸ್ ಕಂಚಿನ ಪದಕ ಹಿಂದಿರುಗಿಸಬೇಕು: ಐಒಸಿ | American gymnast Jordan Chiles