ಸೇಬಿನಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಲೇವನಾಯ್ಲಡ್ ಇನ್ನಿತರ ಪೋಷಕಾಂಶಗಳಿದ್ದು, ಇದರಲ್ಲಿ ಕೊಬ್ಬು ಇರುವುದಿಲ್ಲ. ಹಾಗು ಸೇಬು ದೇಹಕ್ಕೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅತ್ಯಂತ ಹೇರಳ ಪ್ರಮಾಣದ ಆಂಟಿಆಕ್ಸಿಡೆಂಟ್ಗಳು ಇವೆ. ಹಾಗಾಗಿ ಇದನ್ನು ನಿತ್ಯವೂ ಸೇವಿಸಿದರೆ ಕ್ಯಾನ್ಸರ್ ಸಪಾಯ ಕಡಿಮೆ ಇರುತ್ತದೆ. ಮಧುಮೇಹಿಗಳಿಗೆ ಹಾಗು ಹೃದಯ ಸಂಬಧಿ ಕಾಯಿಲೆಗಳಿಂದಾಗುವ ಅಪಾಯವನ್ನು ನಿಯಂತ್ರಿಸು ದಿವ್ಯ ಶಕ್ತಿ ಇದಕ್ಕಿದೆ. ಬನ್ನಿ ಸೇಬು ಹಣ್ಣಿನ ಇನ್ನಿತರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಸೇಬು ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ಗಳಿದ್ದು ಚರ್ಮಕೆ ಹೊಳಪು ನೀಡುತ್ತದೆ. ಅಲ್ಲದೇ ಇದು ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್ನಂತ ರೋಗಗಳನ್ನು ತಡೆಹಿಡಿಯುತ್ತದೆ.
ಸೇಬಿನ ಸೇವನೆ ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತದೆ. ಸಾಂಕ್ರಾಮಿಕಗಳ ವಿರುದ್ಧ ಹೋರಾಡಲು ನಿತ್ಯವೂ ಈ ಹಣ್ಣನ್ನು ಸೇವಿಸಲು ಆಹಾರ ತಜ್ಞರು ಸಲಹೆ ನೀಡುತ್ತಾರೆ.
ಸೇಬಿನಲ್ಲಿ ಫೈಬರ್ ಅಂಶ ಹೇರಳವಾಗಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.
ಪ್ರತಿ ನಿತ್ಯ ಸೇಬು ಸೇವಿಸಿದರೆ ದೇಹದಲ್ಲಿನ ಅಧಿಕ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅನ್ನು ಕರಿಗಿಸುತ್ತದೆ. ಸೇಬಿನ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆ ಬರುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.
ಮಗುವಿಗೆ ಅತಿಸಾರದ ತೊಂದರೆ ಇದ್ದರೆ, ಸೇಬು ಹಣ್ಣಿನ ತಿಳಿ ಜ್ಯೂಸ್ ಕೊಡಿ. ಇಲ್ಲದಿದ್ದರೆ ಸೇಬು ಹಣ್ಣನ್ನು ತುರಿದು ಹಾಲಿನೊಂದಿಗೆ ಬೆರಸಿ ಮಗುವಿಗೆ ನೀಡಿ. ಮಗು ಬೇಗನೆ ಗುಣಮುಖವಾಗುತ್ತದೆ.
ಊಟದ ನಂತರ ಸೇಬಿನ ಸೇವನೆ ಉತ್ತಮ. ಕಾರಣ ತಿಂದ ಆಹಾರವನ್ನು ಇದು ನಿಧಾನವಾಗಿ ಜೀರ್ಣಿಸುತ್ತದೆ. ತಿಂದ ಆಹಾರ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಇರುತ್ತದೆ. ಬೇಗನೆ ಹಸಿವಾಗುವುದಿಲ್ಲ.
ತೂಕ ಇಳಿಸಿಕೊಳ್ಳುವವರು ಸೇಬನ್ನು ತಪ್ಪದೇ ತಿನ್ನಿ. ಇದರಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿ ಇದೆ. ಮಾಂಸದಲ್ಲಿರುವಂತಹ ನಾರಿನಾಂಶ ಇದರಲ್ಲಿದೆ. ಇದು ತೂಕ ಇಳಿಸೋಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಪ್ರತಿ ನಿತ್ಯ ಸೇಬು ಸೇವಿಸಿದರೆ ದೀರ್ಘಕಾಲದ ಅಸ್ತಮಾ ಸಮಸ್ಯೆ ನಿಧಾನವಾಗಿ ವಾಸಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಹೇಳುತ್ತಾರೆ.