ಮಗುವಿನ ಆರೋಗ್ಯ ತಾಯಿಯ ಕೈಯಲ್ಲಿರುತ್ತದೆ. ಮಗುವಿದ್ದಾಗ ಕೊಡುವ ಆಹಾರ ಅವರ ಮುಂದಿನ ಆರೋಗ್ಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಇನು ಮಗುವಿಗೆ ಯಾವೆಲ್ಲಾ ಪೌಷ್ಟಿಕ ಆಹಾರಗಳುನ್ನು ನೀಡಬೇಕೆಂದು ತಾಯಂದಿರಿಗೆ ಗೊಂದಲವಾಗೋದು ಸಹಜ. ಮಗುವಿಗೆ ಯಾವ ಆಹಾರ ಕೊಡಬೇಕು ಯಾವ ಆಹಾರ ಕೊಡಬಾರದು ಎಂದು ತಾಯಿಂದಿರು ಮುಖ್ಯವಾಗಿ ತಿಳಿದುಕೊಳ್ಳಬೇಕು. ಇನ್ನು ಮಗುವಿಗೆ ಹೆಚ್ಚಾಗಿ ಸತು ಕಬ್ಬಿಣಾಂಶ ಇರುವ ಆಹಾರಗಳು ಬೇಕು. ಆದರೆ ಸೀಸ, ಅರ್ಸೆನಿಕ್ ಅಂಶವಿರುವ ಆಹಾರಗಳು ಮುಂದೆ ಮಕ್ಕಳ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಕೆಲ ಸಿದ್ಧ ಆಹಾರಗಳು ಮಗುವಿಗೆ ಬೇಕಾದ ಜೀವಸತ್ವಗಳನ್ನು ಒಳಗೊಂಡಿದ್ದಾದರೂ ಸೀಸ ಆರ್ಸೆನಿಕ್ ನಂತಹ ಆಂಶಗಳನ್ನು ಒಳಗೊಂಡಿರುತ್ತವೆ. ಇಂತಹ ಆಹಾರ ಕುರಿತು ತಾಯಂದಿರಿಗೆ ತಿಳುವಳಿಕೆ ಇರಬೇಕು.
ಇಂತ ಆಹಾರಗಳ ಸೇವನೆಯಿಂದ ಕಾಲಾನಂತರ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು. ಅಲ್ಲದೇ ಇದು ಮಗುವಿನ ಮೆದುಳಿಗೂ ಸಹ ಹಾನಿಯುಂಟು ಮಾಡಬಹುದು. ಹೀಗೆ ಹೊರಗಡೆ ಸಿಗುವ ಸಿದ್ಧ ಆಹಾರಗಳ ಸೇವನೆಯನ್ನ ಮಕ್ಕಳಿಗೆ ಮಾಡಿಸಬೇಡಿ. ಮನೆಯಲ್ಲಿಯೇ ತಯಾರಿಸಿದ ಪೋಷಕಾಂಶಯುಕ್ತ ವಿವಿಧ ಬಗೆ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ಮಕ್ಕಳಿಗೆ ಮಾಡಿ ತಿನಿಸಿ. ತಾಜಾ ಹಣ್ಣು ತರಕಾರಿಗಳ ರಸವನ್ನು ಮಗುವಿಗೆ ನೀಡಿ.
ಅಕ್ಕಿ, ಸಿರಿಧಾನ್ಯಗಳ ಹಿಟ್ಟಿನಿಂದ ಮಾಡಿದ ಗಂಜಿ ಅಥವಾ ಅಂಬಲಿ ಹುಟ್ಟಿದ ಮಗುವಿಗೆ ಕೊಡಬೇಡಿ. ಕಾರಣ ಅಕ್ಕಿ ಮತ್ತು ಇನ್ನಿತರ ಕೆಲ ಧಾನ್ಯಗಳು ಹೆಚ್ಚು ಆರ್ಸೆನಿಕ್ ಅಂಶವನ್ನು ಹೀರಿಕೊಳ್ಳುತ್ತದೆ. ಇನ್ನು ಅಕ್ಕಿಯ ಬದಲಾಗಿ ಬಾರ್ಲಿ ಮತ್ತು ಓಟ್ಸ್‌ನಂತ ಧಾನ್ಯಗಳಿಂದ ಮಾಡಿದ ಆಹಾರಗಳನ್ನು ಮಗುವಿಗೆ ನೀಡಿ.
ಬೀನ್ಸ್, ಸೇಬು, ದ್ರಾಕ್ಷಿ, ಅವಕಾಡೋ, ಬಾರ್ಲಿ, ಬಾಳೆಹಣ್ಣು ಇಂತಹ ತಾಜಾ ಹಣ್ಣು ತರಕಾರಿಗಳನ್ನು ನೀಡಿ. ಸಂಸ್ಕರಿತ ಆಹಾರಗಳನ್ನು ಮಕ್ಕಳಿಗೆ ನೀಡದೇ ಇದ್ದರೆ ಒಳ್ಳೆಯದು. ಬದಲಾಗಿ ಬೇಯಿಸಿದ ಮೊಟ್ಟೆ ಹಾಗು ತಾಜಾ ಮೊಸರನ್ನು ಸೇವನೆ ಮಾಡಲು ಕೊಡಿ.
ಎರಡು ವರ್ಷದ ಒಳಗಿನ ಮಗುವಿಗೆ ನೆಲದ ಒಳಗೆ ಬೆಳೆಯುವಂತಹ ಆಲೂಗಡ್ಡೆ, ಕ್ಯಾರೆಟ್‌ನಂತಹ ತರಕಾರಿಗಳನ್ನು ಕೊಡಬೇಡಿ. ಆದಷ್ಟು ಮನೆಯಲ್ಲಿ ಮಾಡಿದ ಧಾನ್ಯಗಳ ಗಂಜಿ, ಅಂಬಲಿಯನ್ನು ಮಗುವಿಗೆ ನೀಡಿ ಇದೊಂದು ಉತ್ತಮ ಆಯ್ಕೆಯಾಗಿದೆ. ಇದರಿಂದ ಮಕ್ಕಳಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಮಕ್ಕಳಿಗೆ ನೀಡುವುದು ಆರೋಗ್ಯಕರವಾದ ಬೆಳವಣಿಗೆಯಾಗಿದೆ.