ಅಣಬೆಯಲ್ಲಿ ಅನೇಕ ಬಗೆಗಳಿವೆ. ಸೇವನೆಗೆ ಯೋಗ್ಯವಾದ ಅಣಬೆ ಆಯ್ಕೆ ಮಾಡಿಕೊಂಡು ಬಗೆ ಬಗೆಯ ಆಹಾರ ಪದಾರ್ಥಗಳನ್ನು ಮಾಡಬಹುದಾಗಿದೆ. ಅಣಬೆ ಕೇವಲ ಬಾಯಿ ರುಚಿ ಅಲ್ಲದೆ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ.
ಅಣಬೆ ಅಥವಾ ಮಶ್ರೂಮ್ನಲ್ಲಿ ಪ್ರೋಟೀನ್, ಮಿನರಲ್, ವಿಟಮಿನ್, ಆಂಟಿ ಬಯೋಟಿಕ್, ಆಂಟಿ ಯಾಕ್ಸಿಡೆಂಟ್, ಆಸಿಡ್ ಇಂತಹ ಅನೇಕ ಪೋಷಕಾಂಶಗಳಿವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹಕ್ಕೆ ಇನ್ನು ಅನೇಕ ಪೋಷಕಾಂಶಗಳು ಒದಗುತ್ತವೆ. ಒಟ್ಟಾರೆ ಅಣಬೆ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದಂತೂ ಪಕ್ಕಾ ಎನ್ನುತ್ತಾ ಆಹಾರ ತಜ್ಞರು.
ಮಶ್ರೂಮ್ನಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಅಂಶವಿಲ್ಲ. ಅಲ್ಲದೇ ಇದರಲ್ಲಿ ಕಾರ್ಬೋಹೈಡ್ರೇಟ್ ಮಟ್ಟವೂ ತೀರಾ ಕಡಿಮೆ ಪ್ರಮಾಣದಲ್ಲಿ ಇದೆ. ಹಾಗಾಗಿ ಇದರ ಸೇವನೆಯಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಮತ್ತು ಇದೊಂದು ನೈಸರ್ಗಿಕವಾದ ಇನ್ಸುಲಿನ್ ಆಗಿದೆ. ಕಾರಣ ಸೇವಿಸಿದ ಆಹಾರದಲ್ಲಿ ಸಕ್ಕರೆ ಹಾಗು ಸ್ಟಾರ್ಚ್ ಅಂಶವನ್ನು ತೆಗೆದು ಹಾಕು ಶಕ್ತಿ ಅಣಬೆಗೆ ಇದೆ. ಇದರ ಸೇವನೆ ಮಧುಮೇಹಿಗಳಿಗೆ ತುಂಬಾ ಪ್ರಯೋಜನೆ ನೀಡುತ್ತದೆ.
ಮಶ್ರೂಮ್ ತೂಕ ಇಳಿಸಿಕೊಳ್ಳುವವರು ಕಡ್ಡಾಯವಾಗಿ ಸೇವಿಸಬೇಕಾದ ಆಹಾರ. ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಪ್ರೋಟೀನ್ ಅಂಶ ಅಧಿಕವಾಗಿದೆ. ಇದರ ಸೇವನೆ ದೇಹದಲ್ಲಿನ ಕೊಬ್ಬನ್ನು ಕರಿಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಮಶ್ರೂಮ್ ಸೇವನೆ ಕ್ಯಾನ್ಸರ್ ಅಪಾಯವನ್ನೂ ತಡೆಯುತ್ತದೆ ಎಂದರೆ ನೀವು ನಂಬಲೇಬೇಕು. ಇದರಲ್ಲಿ ಆಂಟಿ ಯಾಕ್ಸಿಡೆಂಟ್ಗಳು ಸ್ತನ ಕ್ಯಾನ್ಸರ್, ಶ್ವಾಶಕೋಶ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಇನ್ನು ಇದರಲ್ಲಿರುವ ಫೈಬರ್ ಹಾಗು ಪೊಟ್ಯಾಶಿಯಂ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ತಳ್ಳುತ್ತದೆ.
ಅಣಬೆಯಲ್ಲಿ ವಿಟಮಿನ್ ಡಿ ಹೇರಳವಾಗಿದ್ದು, ಇದರಲ್ಲಿರುವ ಪಾಲಿಸ್ಯಾಕರೈಡ್ಗಳು ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ಇದರ ನಿಯಮಿತವಾದ ಸೇವನೆಯಿಂದ ಚರ್ಮವನ್ನು ಸದಾ ಹೈಡ್ರೇಟ್ ಮಾಡುತ್ತದೆ ಹಾಗು ಸದಾ ಕಾಲ ಚರ್ಮ ಆರೋಗ್ಯವಾಗಿರುವಂತೆ ಮಾಡುತ್ತದೆ.
ಅಣಬೆ ಸೇವನೆಯಿಂದ ಪುರುಷ ಹಾಗು ಮಹಿಳೆಯರಲ್ಲಿ ಲೈಂಗಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದು ಮಹಿಳೆಯರಿಗೆ ಉತ್ತಮ ಫಲವತ್ತತೆ ನೀಡಿ, ಪುರುಷರ ಜನನಾಂಗದ ಅಂಗಗಳ ಪುನಃಸ್ಥಾಪನೆಗೆ ನೆರವಾಗುತ್ತದೆ. ಜೊತೆಗೆ ವೀರ್ಯಗಳ ಸಂಖ್ಯೆಯನ್ನೂ ಹೆಚ್ಚುಸಿ ಅವುಗಳನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಸತು ಅಂಶ ದೇಹಕ್ಕೆ ಪುನಃಶ್ಚೇತನ ನೀಡುತ್ತದೆ.
ಇದರ ಸೇವನೆ ದೇಹದ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಲ್ಲಿ ಆಂಟಿ ಬಯಾಟಿಕ್ ಅಂಶ ದೇಹವನ್ನು ಸೋಕಿನಿಂದ ರಕ್ಷಿಸುತ್ತದೆ. ಅಣಬೆ ದೇಹಕ್ಕೆ ರೋಗನಿರೋಧಕ ಶಕ್ತಿ ನೀಡುವಲ್ಲಿ ಎರಡು ಮಾತಿಲ್ಲ ಅಂತಾರೆ ಪೌಷ್ಟಿಕ ಆಹಾರ ತಜ್ಞರು.