ಸ್ಟ್ರೋಕ್ ಅಂದರೆ ಲಕ್ವಾ ಬಂದರೆ ದೇಹದ ಕೆಲ ಅಂಗಾಗಳನ್ನು ಬಿಗಿಯಾಗಿಸಿ, ಚಲನೆ ಮಾಡದಂತೆ ಮಾಡಿ ಬಿಡುತ್ತದೆ. ಹೀಗೆ ಫೇಸ್ ಪ್ಯಾರಲೈಸಿಸ್‌ಗೆ ಮನೆಮದ್ದಾಗಿ ಹಲಸಿನ ಹಣ್ಣಿನ ಎಲೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಬನ್ನಿ ಹಾಗಿದ್ದರೆ ಹಲಸಿನ ಹಣ್ಣಿನ ಎಲೆ ಬಳಸಿ ಸ್ಟ್ರೋಕ್‌ಗೆ ಹೇಗೆ ಔಷಧಿಯಾಗಿ ಮಾಡಿಕೊಳ್ಳಬೇಕೆಂದು ತಿಳಿದುಕೊಳ್ಳೋಣ.
ಹಲಸಿನ ಹಣ್ಣಿನ ಎಲೆಗಳನ್ನು ತೊಳೆದುಕೊಂಡು ಅದನ್ನು ಜಜ್ಜಿ ಪೇಸ್ಟ್ ತರ ಮಾಡಿಕೊಳ್ಳಬೇಕು. ಇದಕ್ಕೆ ಹರಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ. ಆಮೇಲೆ ಒಲೆ ಹಚ್ಚಿ ಅದರ ಮೇಲೆ ಹೆಂಚು ಇಟ್ಟು ಆ ಮಿಶ್ರಣವನ್ನು ಅದರ ಮೇಲಿಡಿ, ಆ ಶಾಖವನ್ನು ನೋವಿರುವ ಅಥವಾ ಸ್ಟ್ರೋಕ್ ಆಗಿರುವ ಜಾಗಕ್ಕೆ ಕೊಡಬೇಕು. ಉಳಿದ ಮಿಶ್ರಣವನ್ನು ಫೇಸ್ ಸ್ಟ್ರೋಕ್ ಆಗಿದ್ದು ಮುಖದ ಜಾಗಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆಯಬಹುದು. ಹೀಗೆ ನಿರಂತರವಾಗಿ, ನಿಯಮಿತವಾಗಿ ಮಾಡಿದರೆ ಕ್ರಮೇಣವಾಗಿ ಕಾಯಿಲೆ ವಾಸಿಯಾಗುತ್ತದೆ. ಇದೊಂದು ನಾಟಿ ಪದ್ಧತಿ ಎನ್ನಬಹುದು. ಈ ನಾಟಿ ಪದ್ಧತಯಿಂದಲೇ ಫೇಸ್ ಸ್ಟ್ರೋಕ್ ವಾಸಿಯಾಗುವ ಸಂಭವ ಕಡಿಮೆ ಇರುತ್ತದೆ. ಅದು ನಿಮ್ಮ ಕಾಯಿಲೆಯ ತೀವೃತೆಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ನಿಮ್ಮ ವೈದ್ಯರ ಚಿಕಿತ್ಸೆ ಜೊತೆ ಜೊತೆಗೆ ಈ ನಾಟಿ ಔಷಧಿಯನ್ನೂ ಮಾಡಿಕಳ್ಳಬಹುದು.
ಹಲಸಿನ ಹಣ್ಣಿನ ಎಲೆಯಲ್ಲಿ ಲಿಗ್ನನ್ಸ್, ಐಸೋಫ್ಲಾವೋನ್ ಹಾಗು ಸಪೋನಿಸ್‌ನಂತಹ ಅನೇಕ ರೀತಿಯ ಪೈಥೋ ಕೆಮಿಕಲ್ ಗುಣಗಳಿವೆ. ಈ ಎಲ್ಲಾ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತವೆ. ಹಾಗು ಇರದಲ್ಲಿರುವ ಲ್ಯಾಕ್ಟಿನ್ ಎಂಬ ಅಂಶ ಗರ್ಭಕೋಶದ ಕ್ಯಾನ್ಸರ್‌ನ್ನೂ ನಿವಾರಣೆ ಮಾಡುವ ಶಕ್ತಿ ಇದೆ.
ಅಲ್ಲದೆ ತಲೆನೋವು ಹಾಗು ನಿದ್ರಾಹೀನತೆ ಸಮಸ್ಯೆಗೂ ಹಲಸಿನ ಹಣ್ಣಿನ ಎಲೆ ತುಂಬಾ ಪ್ರಯೋಜನಕಾರಿ. ಈ ಎಲೆಯ ಪೇಸ್ಟ್ ಅನ್ನು ತಲೆಗೆ ಹಚ್ಚಿದ್ರೆ ತಲೆನೋವು ವಾಸಿಯಾಗುತ್ತದೆ. ಇದರಲ್ಲಿನ ಮ್ಯಾಗ್ನೀಶಿಯಂ ಹಾಗು ಕಬ್ಬಿನಾಂಶವು ಹೇರಳವಾಗಿದ್ದು. ನಿದ್ರೆಯ ಸಮಸ್ಯೆಯನ್ನೂ ನಿವಾರಿಸುತ್ತದೆ. ರಕ್ತ ಹೀನತೆ ಸಮಸ್ಯೆಯನ್ನು ಇದು ಗುಣಪಡಿಸುತ್ತದೆ. ಹೀಗೆ ಹಲಸಿನ ಹಣ್ಣಿನ ಎಲೆಯಲ್ಲಿ ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳಿವೆ.