ಕೋಲಾರ : ಕೋಲಾರದಲ್ಲಿ ದುಷ್ಕರ್ಮಿಗಳು ಹಾಡು ಹಗಲೇ ಒಂದು ಕೋಟಿಗೂ ಅಧಿಕ ಹಣವನ್ನು ದರೋಡೆ ಮಾಡಿರುವ ಘಟನೆ ನಡೆದಿದ್ದು ಕಾರಿನ ಗಾಜು ಒಡೆದು ಸುಮಾರು 1.60 ಲಕ್ಷ ಹಣವನ್ನು ದೋಚಿರುವ ಘಟನೆ ಶ್ರೀನಿವಾಸಪುರದಲ್ಲಿ ನಡೆದಿದೆ.
ಹೌದು ಕಾರಿನ ಗಾಜು ಒಡೆದು 1.60 ಲಕ್ಷ ಹಣವನ್ನು ದೋಚಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈ ಒಂದು ಘಟನೆ ನಡೆದಿದೆ. ಪಟ್ಟಣದ ಸರ್ಕಾರಿ ಬಸ್ ಡಿಪೋ ಎದುರುಗಡೆ ಕಾರು ನಿಲ್ಲಿಸಿದಾಗ ದರೋಡೆ ಮಾಡಲಾಗಿದೆ.
ಬೆಂಗಳೂರಿನ ಗೋಪಾಲಕೃಷ್ಣ ಎಂಬುವರ ಹಣ ದರೋಡೆ ಮಾಡಿದ ಖದೀಮರು, ಗೋಪಾಲಕೃಷ್ಣ ಅವರು ಪ್ಲೈವುಡ್ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ. ಈ ವೇಳೆ ಸ್ಥಳೀಯ ಮಳಿಗೆಗಳಲ್ಲಿ ಕಲೆಕ್ಷನ್ ಮಾಡಿ ಹಣ ಇಟ್ಟಿದ್ದರು. ಮಧ್ಯಾಹ್ನ ಊಟಕ್ಕೆ ಕಾರು ನಿಲ್ಲಿಸಿ ಹೋದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.