ಬಳ್ಳಾರಿ : ದೇವಸ್ಥಾನದಲ್ಲಿ ನಟ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದ ಅರ್ಚಕರೊಬ್ಬರನ್ನು ಅಮಾನತು ಮಾಡಿರುವ ಘಟನೆ ಬಳ್ಳಾರಿಯ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಗೆ ಬರಲಿ ಎಂದು ಅಭಿಮಾನಿಗಳು ಹೇಳಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಟ ದರ್ಶನ್ ಫೋಟೋಗೆ ಪೂಜೆ ಮಾಡಿದ ಅರ್ಚಕನನ್ನು ಅಮಾನತು ಮಾಡಲಾಗಿದೆ.
ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಫೋಟೋ ಇಟ್ಟು ಅದಕ್ಕೆ ಮಂಗಳಾರತಿ ಮಾಡಿ ಪೂಜೆ ಮಾಡಿದ್ದಾರೆ. ಇದು ದೇವಾಲಯದ ಸಂಪ್ರದಾಯದ ವಿರುದ್ಧವಾಗಿದೆ ಎಂದು ಹೇಳಿ ಅರ್ಚಕ ಮಲ್ಲಿಯನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.