ಬೆಂಗಳೂರು : ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ, ಶಾಲೆಗೆ ಹಾಜರಾಗಲು ನಗರ ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ ಒಳಗೊಂಡಂತೆ) ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಭಾರತ ಸಂವಿಧಾನದ ಕಲಂ 21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು The Karnataka Right of Children to Free and Compulsory Education Rules, 2012 ರನ್ನಯ ಸ್ಥಳೀಯ ಸಂಸ್ಥೆಗಳು ಶಿಕ್ಷಣ ರಿಜಿಸ್ಟರ್ ಅನ್ನು ನಿರ್ವಹಿಸಬೇಕಾಗಿರುತ್ತದೆ. The Karnataka Right of Children to Free and Compulsory Education (Amendment) Rules, 2014 ರನ್ನಯ ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ರಿಟ್ ಅರ್ಜಿ ಸಂಖ್ಯೆ: 15768/2013ಗೆ ಸಂಬಂಧಿಸಿದಂತೆ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ-ಮನೆ ಸಮೀಕ್ಷೆ ಮಾಡುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ ಎಂದು ಮಾನ್ಯ ಉಚ್ಚ ನ್ಯಾಯಾಲಯವು ಆದೇಶಿಸಿರುವ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಹಾಗೂ ಶಾಲೆಗೆ ದಾಖಲಾಗದ ಮಕ್ಕಳ ಬಗ್ಗೆ ಮಾನ್ಯ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಶಾಲೆಯಿಂದ ಹೊರಗುಳಿದ ಮಕ್ಕಳ ನಿಖರ ಸಂಖ್ಯೆಯನ್ನು ಗುರುತಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ ಇಲಾಖಾ (EDCS) ವತಿಯಿಂದ ಅಭಿವೃದ್ಧಿಪಡಿಸಿರುವ “Karnataka H2H Children Survey App’ ಬಳಸಿಕೊಂಡು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಕೈಗೊಳ್ಳುವ ಕುರಿತಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಸುತ್ತೋಲೆಯಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ದಿನಾಂಕ: 30-05-2024 ರಂದು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ mobile app ನಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಿ, ದಿನಾಂಕ: 03-07-2024 ರಂದು ನವೀಕೃತ ಮೊಬೈಲ್ app ನ ಬಳಕೆಯ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ನೋಡಲ್ ಅಧಿಕಾರಿಗಳಿಗೆ ಹಾಗೂ ಮಾಸ್ಟರ್ ಟ್ರೈನರ್ಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ. ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷದಾರರನ್ನು ಗುರುತಿಸಿ ಅವರಿಗೆ ಮಾಸ್ಟರ್ ಟ್ರೈನರ್ಗಳ ಮುಖಾಂತರ ತರಬೇತಿ ನೀಡತಕ್ಕದ್ದು.
ಈ ಸಮೀಕ್ಷೆಯನ್ನು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ (ಬಿಬಿಎಂಪಿ ಒಳಗೊಂಡಂತೆ) ನಡೆಸಲು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಈ ಕೆಳಗಿನಂತೆ ಕ್ರಮಗಳನ್ನು ಅನುಸರಿಸುವುದು.
ಹಂತ-1
ಶಾಲೆಗೆ ದಾಖಲಾಗದಿರುವ ಮಕ್ಕಳನ್ನು ಗುರುತಿಸುವುದು. (Never Enrolied)
- ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಶಾಲೆಗೆ ದಾಖಲಾಗದ ಮಕ್ಕಳ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸೂಚಿಸಲಾಗಿದೆ. ಇದರಲ್ಲಿ 6 ರಿಂದ 14 ವರ್ಷ ವಯೋಮಾನದ ಮಕ್ಕಳ ಮಾಹಿತಿಯನ್ನು ಒಳಗೊಂಡಿರುವುದು. ಈ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವ ಪೂರ್ವದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿರುವ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
- ಸಮೀಕ್ಷೆಯ ಸಮಯದಲ್ಲಿ ವಲಸೆ ಹೋಗಿದ್ದ ಮಕ್ಕಳು, ಕೆಲವು ದಿನಗಳಲ್ಲಿ ವಾಪಸ್ಸು ಬರುವ ಸಂಭವವಿದ್ದಲ್ಲಿ, ಅಂತಹ ಮಕ್ಕಳನ್ನು ಗಣತಿಯ ಸ್ಥಳದಲ್ಲಿ ಪರಿಗಣಿಸಬೇಕು. ಬೇರೆ ಜಿಲ್ಲೆ / ತಾಲ್ಲೂಕುಗಳಲ್ಲಿ ಒಟ್ಟು ಇರುವ ವಲಸೆ ಮಕ್ಕಳ ಪಟ್ಟಿಯನ್ನು ಪರಸ್ಪರ ಪರಿಶೀಲಿಸಿ, ವಿನಿಮಯ ಮಾಡಿಕೊಂಡು, ಎರಡೂ する ಮಕ್ಕಳ ಹಸರು ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳತಕ್ಕದ್ದು. ಇದು ಅತಿ ಮುಖ್ಯವಾದ ಕಾರ್ಯವಾಗಿದೆ.
- ಸಮೀಕ್ಷೆಯಲ್ಲಿ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಶಾಲೆಯಿಂದ ಹೊರಗೆ ಉಳಿದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
- ಶಾಲೆ ಬಿಟ್ಟ ಮಕ್ಕಳು ಹಾಗೂ ಶಾಲೆಗೆ ಸೇರದ ಮಕ್ಕಳ ಮಾಹಿತಿಯನ್ನು WER (Ward Education Register) ನಲ್ಲಿ ನಿರ್ವಹಿಸುವುದು.
ಹಂತ:2: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ವಿಶೇಷವಾಗಿ ಗಮನಿಸಬೇಕಾದ ಸ್ಥಳಗಳು:
- ಸಮೀಕ್ಷೆ ಅಲ್ಲದೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ರಹಿತವಾಗಿರುವ ಕೈಗಾರಿಕಾ ಸ್ಥಳಗಳು, ಕೃಷಿ ಕಾರ್ಮಿಕ ವಲಯಗಳು, ಕೊಳೆಗೇರಿಗಳು (ಸಂ), ಬಸ್ ಮತ್ತು ರೈಲು ನಿಲ್ದಾಣ, ಧಾರ್ಮಿಕ ಕೇಂದ್ರಗಳು, ಅನಾಥಾಶ್ರಮ, ಬಂದಿಖಾನೆಗಳು, ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳು, ಆಸ್ಪತ್ರೆಗಳು, ಹೋಟೆಲ್ಗಳು, ಛತ್ರಗಳು, ಚಿತ್ರಮಂದಿರಗಳು, ಸಣ್ಣ ಕಾರ್ಖಾನೆಗಳು, ತಯಾರಿಸುವ ಸ್ಥಳಗಳು, ಮಂಡಕ್ಕಿ ಭಟ್ಟಿಗಳು ಹಾಗೂ ಇತರೆ ಸ್ಥಳಗಳಲ್ಲಿ ಶಾಲೆಗಳಿಂದ ಮಕ್ಕಳು ಸಿಗುವುದರಿಂದ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ (ಬಿ.ಬಿ.ಎಂ.ಪಿ. ಒಳಗೊಂಡಂತೆ) ಮೇಲ್ಕಾಣಿಸಿದ ಸ್ಥಳಗಳನ್ನು ಮುಂಚಿತವಾಗಿ ಗುರುತಿಸಿಕೊಂಡು ಗಣತಿ ಕಾರ್ಯ ಕೈಗೊಳ್ಳತಕ್ಕದ್ದು.