ಬೆಂಗಳೂರು: ಕೆಪಿಎಸ್ಸಿಯಿಂದ ಆಗಸ್ಟ್.25ರಂದು ಕೆಎಎಸ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸುವುದಾಗಿ ನಿಗದಿ ಪಡಿಸಲಾಗಿತ್ತು. ಈ ಪರೀಕ್ಷಾ ದಿನಾಂಕವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಅಂತನೂ ಕೆಪಿಎಸ್ಸಿ ಕಾರ್ಯದರ್ಶಿ ಸ್ಪಷ್ಟ ಪಡಿಸಿದ್ದರು. ಇದರ ನಡುವೆಯೂ ಆಗಸ್ಟ್.25ರಂದು ನಡೆಯಬೇಕಿದ್ದಂತ KAS ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಈ ಕುರಿತಂತೆ KPSCಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ದಿನಾಂಕ 25-08-2024ರಂದು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ನಿಗದಿ ಪಡಿಸಲಾಗಿತ್ತು. ಆದರೇ ಅಂದೇ ಬೇರೆ ಪರೀಕ್ಷೆಗಳು ನಿಗದಿಯಾಗಿದ್ದರಿಂದ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು ಎಂದಿದೆ.
ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಗಸ್ಟ್.25, 2024ರಂದು ನಡೆಸಲು ನಿಗದಿ ಪಡಿಸಿದ್ದಂತ ಕೆಎಎಸ್ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಆಗಸ್ಟ್.25ರ ಬದಲಾಗಿ ಆಗಸ್ಟ್.27ರ ಮಂಗಳವಾರದಂದು ನಡೆಸಲು ಮರು ನಿಗದಿ ಪಡಿಸಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಸಚಿವರ ಆದೇಶದ ಬೆನ್ನಲ್ಲೇ ಪಶ್ಚಿಮಘಟ್ಟದಲ್ಲಿ ’69 ಎಕರೆ ಅರಣ್ಯ ಒತ್ತುವರಿ’ ತೆರವು
BREAKING: ಬೆಳಗಾವಿಯಲ್ಲಿ ಘೋರ ದುರಂತ: ದೇವಸ್ಥಾನ ಸ್ವಚ್ಛಗೊಳಿಸುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ದುರ್ಮರಣ