ಯಾದಗಿರಿ : ಯಾದಗಿರಿಯ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕ ಸ್ಥಾನದಿಂದ ಚನ್ನರೆಡ್ಡಿ ಪಾಟೀಲ್ ಅವರನ್ನು ವಜಾಗೊಳಿಸಬೇಕು ಎಂದು ಸ್ಪೀಕರ್ ಯುಟಿ ಖಾದರ್ ಅವರಿಗೆ ಸಾಮಾಜಿಕ ಕಾರ್ಯಕರ್ತರು ಒಬ್ಬರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಹೌದು ಪಿಎಸ್ಐ ಪರಶುರಾಮ ಅವರ ಸಾವಿಗೆ ಕಾಂಗ್ರೆಸ್ ನ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರೇ ಕಾರಣ ಎಂದು ಅವರ ಪತ್ನಿ ಶ್ವೇತ ಆರೋಪಿಸಿದ್ದಾರೆ. ಹೀಗಾಗಿ ಶಾಸಕ ಸ್ಥಾನದಿಂದ ಚೆನ್ನ ರೆಡ್ಡಿ ಪಾಟೀಲ್ ಅವರನ್ನು ಕೂಡಲೇ ವಜಾ ಗೊಳಿಸಬೇಕು ಎಂದು ಸ್ಪೀಕರ್ ಯುಟಿ ಖಾದರ್ ಗೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಎಂಬುವವರು ಪತ್ರ ಬರೆದಿದ್ದಾರೆ.
ಪರಶುರಾಮ ಸಾವಿನ ಆರೋಪ ಶಾಸಕರ ಮೇಲೆ ಇದ್ದು, ಸೂಕ್ತ ತನಿಖೆ ಆಗಬೇಕು, ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಬೇಕು. ಹೀಗಾಗಿ ಸೂಕ್ತ ಹಾಗೂ ನ್ಯಾಯಬದ್ಧ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಶಾಸಕರು ಹಾಗೂ ಪುತ್ರನ ಮೇಲೆ ಕಮೀಷನ್ ಆರೋಪಿವಿದೆ. ಉದ್ಯೋಗ ಖಾತ್ರಿ ಬಿಲ್ ಮಾಡಲು ವಡಗೇರ ತಾಲೂಕಿನಲ್ಲಿ ಕಮೀಷನ್ ಪಡೆಯುತ್ತಿದ್ದಾರೆ. ಹೀಗಾಗಿ ಸೂಕ್ತ ತನಿಖೆ ಮಾಡುವಂತೆ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.