ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಅನಿವಾರ್ಯವಾಗಿದೆ. ಎಲ್ಲರ ಕೈಯಲ್ಲೂ ಫೋನ್ ಇರಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿ ಸಣ್ಣ ಅಗತ್ಯಕ್ಕೂ ಸ್ಮಾರ್ಟ್‌ಫೋನ್ ಹೊಂದಿರಬೇಕು. ಆದ್ರೆ, ಸ್ಮಾರ್ಟ್ ಫೋನ್ ಬಳಸುವ ಪ್ರತಿಯೊಬ್ಬರೂ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಚಾರ್ಜಿಂಗ್ ಕೂಡ ಒಂದು. ಸಾಮಾನ್ಯವಾಗಿ ಫೋನ್’ನೊಂದಿಗೆ ಬರುವ ಚಾರ್ಜರ್’ಗಳು ಕೆಲವು ದಿನಗಳ ನಂತರ ಹಾಳಾಗಿ ಹೋಗುತ್ವೆ.
ಹಾಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಚಾರ್ಜರ್ ಖರೀಸುವುದಕ್ಕು ಮುನ್ನ ಎಚ್ಚರ ವಹಿಸಿ. ವಿಶೇಷವಾಗಿ ಮೂಲ ಕಂಪನಿಯ ಚಾರ್ಜರ್’ಗಳು ದುಬಾರಿಯಾಗಿದೆ. ಇದರೊಂದಿಗೆ, ಕಡಿಮೆ ವೆಚ್ಚದ ಟ್ರಾವೆಲಿಂಗ್ ಚಾರ್ಜರ್’ಗಳನ್ನ ಖರೀದಿಸುತ್ತಾರೆ. ಆದ್ರೆ, ಇವುಗಳಿಂದ ನಿಮ್ಮ ಸ್ಮಾರ್ಟ್ ಫೋನ್ ಹಾಳಾಗುವ ಅಪಾಯವಿದೆ. ಅಂದ್ಹಾಗೆ, ಮಾರುಕಟ್ಟೆಯಲ್ಲಿ ಡ್ಯೂಪ್ಲಿಕೇಟ್ ಚಾರ್ಜರ್’ಗಳೂ ಹೆಚ್ಚುತ್ತಿವೆ. ಹಾಗಾಗಿ ನೀವು ಬಳಸುತ್ತಿರುವ ಚಾರ್ಜರ್ ಒರಿಜಿನಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನ ತಿಳಿಯಲು ಕೆಲವು ಸಲಹೆಗಳು ಲಭ್ಯವಿವೆ.
* ಚಾರ್ಜರ್’ನ ಹಿಂಭಾಗದಲ್ಲಿ ಡಬಲ್ ಸ್ಕ್ವೇರ್ ಚಿಹ್ನೆ ಇದ್ದರೆ, ಮೊಬೈಲ್ ಚಾರ್ಜರ್’ನ ಒಳಗೆ ಬಳಸುವ ವೈರಿಂಗ್ ಡಬಲ್ ಇನ್ಸುಲೇಟ್ ಆಗಿದೆ ಎಂದು ಅರ್ಥ. ಈ ಚಾರ್ಜರ್’ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಕಡಿಮೆ. ಹಾಗಾಗಿ ಈ ಚಾರ್ಜರ್ ಬಳಸುವುದು ಸುರಕ್ಷಿತವಾಗಿದೆ ಎಂದರ್ಥ.
* ಚಾರ್ಜರ್ ಮೇಲೆ V ಅಕ್ಷರ ಇದ್ದರೆ, ಅದು ಚಾರ್ಜರ್’ನ ಸಾಮರ್ಥ್ಯವನ್ನ ಸೂಚಿಸುತ್ತದೆ. ಇದರರ್ಥ ಚಾರ್ಜರ್ ಐದು ಮಾನದಂಡಗಳನ್ನ ಪೂರೈಸುತ್ತದೆ. ಈ ಸಂಖ್ಯೆಯು ಚಾರ್ಜರ್’ಗಳ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
* ಚಾರ್ಜರ್ ಮೇಲೆ ಮನೆಯ ಚಿಹ್ನೆ ಕಾಣಿಸಿಕೊಂಡರೆ, ಚಾರ್ಜರ್ ವೈಯಕ್ತಿಕ ಬಳಕೆಗೆ ಮಾತ್ರ ಎಂದು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಈ ಚಾರ್ಜರ್’ನ್ನ ಹೆಚ್ಚಿನ ವೋಲ್ಟೇಜ್ ಪ್ರದೇಶಗಳಲ್ಲಿ ಬಳಸಬಾರದು. ಹೀಗೆ ಮಾಡುವುದರಿಂದ ಫೋನ್ ಹಾಳಾಗಬಹುದು.
* ಚಾರ್ಜರ್’ಗಳ ಮೇಲೆ 8 ಚಿಹ್ನೆಯನ್ನ ಬರೆಯಲಾಗಿದೆ ಎಂದು ನೀವು ಗಮನಿಸಬಹುದು. ಇದರರ್ಥ ನಿಮ್ಮ ಚಾರ್ಜರ್ ಎಲ್ಲಾ ಸುರಕ್ಷತಾ ಮಾನದಂಡಗಳನ್ನ ಪೂರೈಸುತ್ತದೆ. ನಿಮ್ಮ ಚಾರ್ಜರ್ ಉತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ಇದರರ್ಥ ಇದು ಗುಣಮಟ್ಟದ ಚಾರ್ಜರ್ ಆಗಿದೆ.
* ಕೆಲವು ಚಾರ್ಜರ್’ಗಳು ಕ್ರಾಸ್ ಡಸ್ಟ್ ಬಿನ್ ಚಿಹ್ನೆಗಳನ್ನ ಸಹ ಹೊಂದಿವೆ. ಅಂದರೆ ಈ ಚಾರ್ಜರ್ ಹಾಳಾಗಿದ್ದರೆ ಡಸ್ಟ್ ಬಿನ್’ಗೆ ಎಸೆಯಬಾರದು. ಇದರರ್ಥ ಇದು ಮರುಬಳಕೆ ಚಾರ್ಜರ್.
BIGG NEWS : ‘ಮುಕೇಶ್ ಅಂಬಾನಿ’ ಹಿಂದಿಕ್ಕಿದ ‘ಗೌತಮ್ ಅದಾನಿ’, ಶ್ರೀಮಂತ ಭಾರತೀಯ ಪಟ್ಟ
‘ಗೃಹಲಕ್ಷ್ಮೀ ಯೋಜನೆ’ ಫಲಾನುಭವಿಗಳಿಗೆ ‘ಸಿಎಂ ಸಿದ್ಧರಾಮಯ್ಯ’ ಈ ಅಭಯ: ಒಟ್ಟಿಗೆ 2000 ಜಮಾ | Gruhalakshmi Scheme
BREAKING : ಬಾಹ್ಯಾಕಾಶ ನಿಲ್ದಾಣಕ್ಕೆ ‘ಇಂಡೋ- US ಮಿಷನ್’ : ‘ಪ್ರಧಾನ ಗಗನಯಾತ್ರಿ’ಯಾಗಿ ‘ಶುಭಾಂಶು ಶುಕ್ಲಾ’ ಆಯ್ಕೆ