ತೆಲಂಗಾಣ : ಇಂದಿನ ಕಾಲದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಹೆರುವುದು ಅಷ್ಟೇ ಮಾಡುತ್ತಾರೆ, ಹೊರತು ಆದರೆ ಪಾಲನೆ ಪೋಷಣೆ ಹಾಗೂ ಮಕ್ಕಳ ಸುರಕ್ಷತೆಯ ಕುರಿತು ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಇದೀಗ ಮೊಬೈಲ್ ಫೋನ್ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡು ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಹೌದು ಗ್ರಾಮಸ್ಥರ ಪ್ರಕಾರ ಆರಾಧ್ಯ ಕೊಟ್ಟಮಡ್ಡಿಪಾಡಿಗದ ದುರ್ಗಂ ರಾಜಲಿಂಗು ಮತ್ತು ಸುಶೀಲಾ ದಂಪತಿಯ ಎರಡನೇ ಪುತ್ರಿ. ಗುರುವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ವಿದ್ಯುತ್ ಬೋರ್ಡ್ಗೆ ನೇತಾಡುತ್ತಿದ್ದ ಸೆಲ್ ಫೋನ್ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡಿದ್ದು ವಿದ್ಯುತ್ ಆಘಾತದಿಂದ ಪ್ರಜ್ಞೆ ತಪ್ಪಿದೆ.ಕೂಡಲೇ ಪೋಷಕರು ಆಕೆಯನ್ನು ಖಾನಾಪುರ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಒಂದೂವರೆ ವರ್ಷದ ಬಾಲಕಿ ದುರ್ಗಂ ಆರಾಧ್ಯ ವಿದ್ಯುತ್ ಬೋರ್ಡ್ಗೆ ನೇತಾಡುತ್ತಿದ್ದ ಸೆಲ್ಫೋನ್ ಚಾರ್ಜಿಂಗ್ ಕೇಬಲ್ ಅನ್ನು ಬಾಯಿಗೆ ಹಾಕಿಕೊಂಡಿದ್ದಾಳೆ. ತಕ್ಷಣ ಹುಡುಗಿ ಆಘಾತಕ್ಕೊಳಗಾಗಿದ್ದಾಳೆ. ಮಗುವಿಗೆ ವಿದ್ಯುತ್ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವಳನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲಾಗಿದೆ. ಆದರೆ ಮಗು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇದರಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.