ಮಂಡ್ಯ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಂತಹ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ಮಾಡಲು ನಿರ್ಧರಿಸಿದೆ ಈ ವಿಷಯವಾಗಿ ಅಧಿಕಾರದಿಂದ ತೆಗೆಯುತ್ತಾರೆಂದು HD ಕುಮಾರಸ್ವಾಮಿ ಪಾದಯಾತ್ರೆಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಇಂದು ಅವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳನ್ನು ಪ್ರಶ್ನೆ ಮಾಡುತ್ತೇವೆ. ನಮ್ಮ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ.ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ಕೊಡಲೇಬೇಕಲ್ಲ. ಅಧಿಕಾರದಿಂದ ತೆಗೆಯುತ್ತಾರೆ ಎಂದು ಬೆಂಬಲ ಕೊಡುತ್ತಿದ್ದಾರೆ.ಬಿಜೆಪಿಯವರು ಎಚ್ಡಿಕೆಗೆ ಹೆದರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದರು.
ಬಿಜೆಪಿ ಜೆಡಿಎಸ್ ಪಾದಯಾತ್ರೆ ವಿಚಾರ ನಾವು ಅವರಿಗೂ ಮೊದಲೇ ಜನಾಲೋಂದನ ಸಭೆ ಮಾಡುತ್ತೇವೆ. ಎಚ್ ಡಿ ಕುಮಾರಸ್ವಾಮಿ ನಿರ್ಧಾರ ಮಾಡಿದರೆ ಮಾತು ಬದಲಿಸುವುದಿಲ್ಲ ಅಂತಿದ್ರು. ಇದೀಗ ಹೆಚ್ ಡಿ ಕುಮಾರಸ್ವಾಮಿ ಯಾಕೆ ಮಾತು ಬದಲಿಸಿದ್ದಾರೆ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಕಿಡಿ ಕಾರಿದರು.
ಇನ್ನೂ ಸಿಎಂ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ವಿಚಾರವಾಗಿ ಮಾತನಾಡಿದ ಅವರು, ತನಿಖೆಗೆ ಕಾನೂನು ಬದ್ಧವಾಗಿ ಅನುಮತಿ ಕೊಡಲು ಅವಕಾಶವಿಲ್ಲ. ಸಿಎಂ ಕುಟುಂಬ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನ ಹಂಚಿಕೆಯಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಶಶಿಕಲಾ ಜೊಲ್ಲೆ, ನಿರಾಣಿ ವಿರುದ್ಧ ಆರೋಪ ಇತ್ತು. ಈವರೆಗೂ ಅವರ ವಿರುದ್ಧ ರಾಜಕೀಯ ಅನುಮತಿ ಕೊಟ್ಟಿಲ್ಲ. ಸಿದ್ದರಾಮಯ್ಯಗೆ ನೋಟಿಸ್ ಕೊಡುತ್ತಿರುವುದು ರಾಜಕೀಯ ಪ್ರೇರಿತ. ಸಿಎಂ ಸ್ಥಾನಕ್ಕೆ ಯಾವುದೇ ಕುತ್ತು ಇಲ್ಲ ಈ ಹಿಂದೆ ಹಲವರ ವಿರುದ್ಧ ಪ್ರಾಜೀಕೃಷನ್ ಗೆ ಅನುಮತಿ ನೀಡಿಲ್ಲ ಕಾಂಗ್ರೆಸ್ಸಿನ 136 ಶಾಸಕರು ಸಿದ್ದರಾಮಯ್ಯ ಪರವಾಗಿ ಇದ್ದಾರೆ ಎಂದು ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ ತಿಳಿಸಿದರು.