ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದೀಗ ಆಕಸ್ಮಿಕವಾಗಿ ಒಂದು ಘಟನೆ ನಡೆದಿದ್ದು ಭಾರಿ ಅನಾಹುತ ಒಂದು ತಪ್ಪಿದೆ. ನಿನ್ನೆ ರಾತ್ರಿ 4 ವರ್ಷದ ಮಗುವೊಂದು ಮೆಟ್ರೋ ಹಳಿಗೆ ಜಿಗಿದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಲೋಪ ಉಂಟಾಗಿದ್ದು ನಿನ್ನೆ ರಾತ್ರಿ ಟ್ರ್ಯಾಕ್ಗೆ ಮಗು ಜಿಗಿದಿದೆ. ನಿನ್ನೆ ಆಟವಾಡುತ್ತಾ ಟ್ರ್ಯಾಕ್ಗೆ 4 ವರ್ಷದ ಮಗು ಜಿಗಿದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಗು ಇದೀಗ ಪಾರಾಗಿದೆ. ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಈ ಒಂದು ಅವಘಡ ನಡೆದಿದೆ.
ಈ ವೇಳೆ ತಕ್ಷಣ ಟ್ರ್ಯಾಕ್ ನ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿದ ಸಿಬ್ಬಂದಿಗಳು. ಬೈಯಪ್ಪನಹಳ್ಳಿ ಪರ್ಪಲ್ ಲೈನ್ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.ನಿನ್ನೆ ರಾತ್ರಿ 9 16ರ ವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತಯ ಉಂಟಾಗಿತ್ತು.ತಕ್ಷಣ ಬಿಎಂಆರ್ಸಿಎಲ್ 2 ಮೆಟ್ರೋ ಸಂಚಾರ ಸ್ಥಗಿತಗೊಳಿಸಿತ್ತು. ಬಳಿಕ ಎಂದಿನಂತೆ ಮೆಟ್ರೋ ಸಂಚಾರ ಪುನರಾರಂಭಗೊಂಡಿದೆ.