ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ತಾಯಿಯ ಸಾವಿಗೆ ಮನನೊಂದು ಅಣ್ಣ ತಂಗಿ ಇಬ್ಬರು ಶಿಡ್ಲಘಟ್ಟ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೌದು ಅಣ್ಣ ಪ್ರಭು (25) ಹಾಗೂ ತಂಗಿ ನವ್ಯ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಶಿಡ್ಲಘಟ್ಟದವರು ಎಂದು ತಿಳಿದು ಬಂದಿದೆ.ಇತ್ತೀಚಿಗೆ ಮೃತರ ತಾಯಿ ಕೂಡ ನಿಧನರಾಗಿದ್ದರು. ತಾಯಿಯ ಸಾವಿಗೆ ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.