ಆಂಧ್ರಪ್ರದೇಶ : ಇತ್ತೀಚಿಗೆ ಕೋಲಾರದಲ್ಲಿ ಶೌಚಾಲಯದಲ್ಲೆ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಬಾಲಕಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದು ಆದರೆ ಹುಟ್ಟಿದ ತಕ್ಷಣ ನವಜಾತ ಶಿಶು ಸಾವನಪ್ಪಿರುವ ಘಟನೆ ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ನಡೆದಿದೆ.
ಹೌದು ಶಾಲೆಯ ಶೌಚಾಲಯದಲ್ಲಿ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಚೀಮಕುರ್ತಿ ಮಂಡಲದ ನಿವಾಸಿಯಾದ 16 ವರ್ಷದ ವಿದ್ಯಾರ್ಥಿಯು ಕೋತಪಟ್ಟಣಂನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಓದುತ್ತಿದ್ದಳು.
ಜೂನ್ 19 ರಂದು ಶಾಲೆಗೆ ಸೇರಿದ್ದಳು ಮತ್ತು ನಿತ್ಯವೂ ತರಗತಿಗಳಿಗೆ ಹಾಜರಾಗುತ್ತಿದ್ದಳು. ಈ ಸಂದರ್ಭದಲ್ಲಿ ಅವಳು ಶೌಚಾಲಯಕ್ಕೆ ಹೋದಾಗ ಮಗುವಿಗೆ ಜನ್ಮ ನೀಡಿದ್ದಾಳೆ ಇದಕ್ಕೂ ಮೊದಲು ಆಕೆಗೆ ಹಲವಾರು ಬಾರಿ ಹೆರಿಗೆ ನೋವು ಕಾಣಿಸಿಕೊಂಡರು ಕೂಡ ಶಾಲೆಯ ಅಧಿಕಾರಿಗಳ ಮುಂದೆ ಆಗಲಿ ಅಥವಾ ಶಿಕ್ಷಕರ ಮುಂದೆ ಆಗಲಿ ತಿಳಿಸಿರಲಿಲ್ಲ. ಬಹುಶಹ ಆಕೆಯ ಪೋಷಕರಿಗೂ ಕೂಡ ಈ ವಿಷಯ ತಿಳಿದಿರಲಿಕ್ಕಿಲ್ಲ.
ವಿದ್ಯಾರ್ಥಿನಿ ತುಂಬಾ ಸಮಯದವರೆಗೆ ತರಗತಿಗೆ ಹಿಂದಿರುಗದಿದ್ದಾಗ ಅನುಮಾನಗೊಂಡ ಆಕೆಯ ಸಹಪಾಠಿಗಳು ಹಾಗೂ ಶಿಕ್ಷಕರು ಪರೀಕ್ಷಿಸಲು ಶೌಚಾಲಯಕ್ಕೆ ಹೋಗಿದ್ದಾರೆ. ಅಲ್ಲಿ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಕಂಡು ಶಾಕ್ ಆಗಿದ್ದಾರೆ.ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ವಿದ್ಯಾರ್ಥಿನಿಯನ್ನು ಒಂಗೋಲ್‌ನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ರವಾನಿಸಲಾಗಿದ್ದು, ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.