ರಾಮನಗರ : ಕಳೆದ ವರ್ಷ ರಾಜ್ಯದಲ್ಲಿ ಇಡೀ ದೇಶದಲ್ಲಿ ಭ್ರೂಣಹತ್ಯೆ ಭಾರಿಸಂಚಲನ ಮೂಡಿಸಿತ್ತು. ಇದೀಗ ಭ್ರೂಣಹತ್ಯೆ ಹತ್ಯೆ ಮಾಡಿಸಿದ ಪ್ರಿಯಕರನ ವಿರುದ್ಧ ಹಾಗೂ ಆತನ ವಿರುದ್ಧ ದೂರು ನೀಡಿದ್ದರು ಸಹ ಕ್ರಮ ಕೈಗೊಳ್ಳದ ರಾಮನಗರ ಪೋಲೀಸರ ವಿರುದ್ಧ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ಹೌದು ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮಹಿಳೆಯು ಭ್ರೂಣಹತ್ಯೆ ಮಾಡಿಸಿದ ಆರೋಪದ ಅಡಿ ಮಹಿಳೆ ಪ್ರಿಯಕರ ದಯಾನಂದ್ ವಿರುದ್ಧ ದೂರು ನೀಡಿದ್ದಳು. ಮಧ್ಯವರ್ತಿ ಮೂಲಕ 1.40 ಲಕ್ಷ ಲಂಚ ಪಡೆದ ಆರೋಪ ಕೇಳಿ ಬಂದಿದ್ದು, ರಾಮನಗರ ಮಹಿಳಾ ಠಾಣೆ ಸಿಪಿಐ ವಿರುದ್ಧ ಲಂಚ ಪಡೆದ ಆರೋಪ ಕೇಳಿ ಬಂದಿದೆ. 1.40 ಲಕ್ಷ ಲಂಚ ನೀಡಿದರು ಸಿಪಿಐ ಕ್ರಮ ಕೈಗೊಂಡಿಲ್ಲವೆಂದು ಮಹಿಳೆ ಆರೋಪಿಸಿದ್ದಾಳೆ.
ಕಳೆದ ನಾಲ್ಕು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದು ಬೇಸತ್ತು ಹೋಗಿದ್ದೇನೆ.ನ್ಯಾಯ ಸಿಗದಿದ್ದರೆ ಎಸ್ ಪಿ ಕಚೇರಿಯ ದೊರೆ ಆತ್ಮಹತ್ಯೆ ಮಾಡಿಕೊಳ್ಳುವೆ. ಪ್ರಿಯಕರ ಪೊಲೀಸರಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ ಎಂದು ಮಹಿಳೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. 5 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಪತಿಯಿಂದ ದೂರವಾಗಿದ್ದಳು.
ಇಷ್ಟವಿಲ್ಲದ ಕಾರಣದಿಂದ ಮದುವೆ ಮುರುಗ ಬಿದ್ದು ದೂರವಾಗಿದ್ದರು. ಈ ವೇಳೆ ಖಾಸಿಗೆ ಆಸ್ಪತ್ರೆಯಲ್ಲಿ ಮಹಿಳೆ ನರ್ಸ್ ಆಗಿ ಸೇರಿಕೊಂಡಾಗ ದಯಾನಂದ ಪರಿಚಯವಾಗಿತ್ತು. ಮಹಿಳೆ ಜೊತೆ ದಯಾನಂದ ಈ ವೇಳೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಮಹಿಳೆ ಗರ್ಭಿಣಿ ಆಗಿರುವುದನ್ನು ತಿಳಿದು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ.
ಗರ್ಭಪಾತ ಮಾಡಿಸಿದ ನಂತರ ಪ್ರಿಯಕರ ದಯಾನಂದ ಸಂಪರ್ಕಕ್ಕೆ ಸಿಕ್ಕಿಲ್ಲ. ದಯಾನಂದ ವಿರುದ್ಧ ಭ್ರೂಣ ಹತ್ಯೆ ಆರೋಪಿಸಿ ಕ್ರಮಕ್ಕೆ ಒತ್ತಾಯಿಸಲಾಗಿದೆ.ರಾಮನಗರ ಪೊಲೀಸರು ಲಂಚ ಪಡೆದು ಅವನನ್ನು ಬಿಟ್ಟಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.ಹೀಗಾಗಿ ಪೊಲೀಸರು ಪ್ರಿಯಕರ ಹಾಗೂ ಸಿಪಿಐ ವಂಚನೆಗೆ ಒಳಗಾಗಿರುವ ನನಗೆ ನ್ಯಾಯ ಬೇಕು.
ನನಗೆ ನ್ಯಾಯ ಸಿಗದಿದ್ದರೆ ಎಸ್ವಿ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರಿಯಕರ ದಯಾನಂದ ಹಾಗೂ ರಾಮನಗರ ಪೊಲೀಸರ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದಿದದ್ದಿದಾಳೆ. ರಾಮನಗರ ಜಿಲ್ಲೆಯ ಮಾಗಡಿ ಮೂಲದ ಮಹಿಳೆಯರ ಪ್ರಧಾನಿ ಮೋದಿಗೆ ಪತ್ರ ಬರೆಡಿದ್ದಾಳೆ.