ಬೆಂಗಳೂರು: ಈಗಾಗಲೇ ಒಂದು ಬಾರಿ 384 ಕೆ ಎಎಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿತ್ತು. ಮತ್ತೆಯೂ ಮುಂದೂಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೇ 384 ಕೆಎಎಸ್ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್.25ರಂದೇ ನಡೆಸಲಾಗುತ್ತದೆ. ಆ ದಿನಾಂಕದಲ್ಲಿ ಬದಲಾವಣೆ ಇಲ್ಲ ಅಂತ ಕೆಪಿಎಸ್ಸಿ ಕಾರ್ಯದರ್ಶಿ ಕೆ.ರಾಕೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಈಗಾಗಲೇ ಆಯೋಗದ ಸಭೆಯಲ್ಲಿ ಚರ್ಚೆ ನಡೆಸಿ, ಕೆಎಎಸ್ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಫೈನಲ್ ಮಾಡಲಾಗಿದೆ. ಆಗಸ್ಟ್.25ರಂದೇ ಪೂರ್ವಭಾವಿ ಪರೀಕ್ಷೆಯನ್ನು 384 ಕೆಎಎಸ್ ಹುದ್ದೆ ನೇಮಕ ಸಂಬಂಧ ನಡೆಸಲಾಗುತ್ತದೆ. ಪರೀಕ್ಷೆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.
ಅಂದಹಾಗೇ ಆಗಸ್ಟ್.25ರಂದು ವಿವಿಧ ಬ್ಯಾಂಕುಗಳ ನೇಮಕಾತಿಗೆ ಸಂಬಂಧಿಸಿದಂತೆ 6,128 ಗುಮಾಸ್ತ ಹುದ್ದೆಗಳಿಗೆ ಬ್ಯಾಂಕಿಂಗ್ ಪರೀಕ್ಷೆಯನ್ನು ಐಬಿಪಿಎಸ್ ನಡೆಸಲಿದೆ. ಇವುಗಳಲ್ಲಿ 457 ಹುದ್ದೆಗಳು ಕರ್ನಾಟಕದಲ್ಲಿ ಖಾಲಿ ಇದ್ದಾವೆ. ಈ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹುದ್ದೆಗಳಿಗೂ ಅರ್ಜಿಯನ್ನು ಅಭ್ಯರ್ಥಿಗಳು ಹಾಕಿರುವ ಕಾರಣ, ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡುವಂತೆ ಒತ್ತಾಯ ಕೇಳಿ ಬಂದಿತ್ತು. ಆದರೇ ಆಗಸ್ಟ್.25ರಂದೇ 384 ಕೆಎಎಸ್ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸುವುದಾಗಿ ಕೆಪಿಎಸ್ಸಿ ಕಾರ್ಯದರ್ಶಿ ಸ್ಪಷ್ಟ ಪಡಿಸಿದ್ದಾರೆ.
ಕೇರಳದಲ್ಲಿ ಭೂ ಕುಸಿತ: ಕರ್ನಾಟಕದಲ್ಲೂ ಎಚ್ಚರಿಕೆ ವಹಿಸಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಲಹೆ
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’
ಶಿವಮೊಗ್ಗ: ನಾಳೆ ‘ಮಳೆಹಾನಿ ಪ್ರದೇಶ’ಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಭೇಟಿ, ವೀಕ್ಷಣೆ