ಶಿವಮೊಗ್ಗ: ಪುತ್ರಿಯ ಮನೆಗೆ ಬೆಲ್ಜಿಯಂಗೆ ತೆರಳಿದ್ದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬೆಂಗಳೂರಿಗೆ ಇಂದು ವಾಪಾಸ್ ಆಗಿದ್ದರು. ಈ ಬೆನ್ನಲ್ಲೇ ಸಾಗರದ ಸ್ವ ಕ್ಷೇತ್ರಕ್ಕೆ ಆಗಮಿಸುತ್ತಿರುವಂತ ಆವರು, ನಾಳೆ ಇಡೀ ದಿನ ಸಾಗರ ನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಳೆಯಿಂದ ಬಿದ್ದಂತ ಮನೆಗಳನ್ನು ವೀಕ್ಷಣೆ ಮಾಡಲಿದ್ದಾರೆ.
ವಿದೇಶಕ್ಕೆ ತೆರಳಿದ್ದಂತ ಶಾಸಕ ಬೇಳೂರು ಗೋಪಾಲಕೃಷ್ಣ ಬೆಂಗಳೂರಿಗೆ ಮರಳಿದ್ದು, ಇಂದು ಮಧ್ಯರಾತ್ರಿ ಸಾಗರಕ್ಕೆ ಆಗಮಿಸಲಿದ್ದಾರೆ. ಆ ನಂತ್ರ ದಿನಾಂಕ 31-07-2024ರ ನಾಳೆ ಬೆಳಿಗ್ಗೆ 8 ಗಂಟೆಯಿಂದಲೇ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ನಾಳೆ ಬೆಳಿಗ್ಗೆ 8 ಗಂಟೆಯಿಂದ ಚಂದ್ರಮಾವಿನ ಕೊಪ್ಪಲು, ಜೆಪಿ ನಗರ, ಸುಭಾಷ್ ನಗರ, ಅರಮನೆಕೇರಿ, ಎಲ್ ಬಿ ನಗರ, ರೈಲ್ವೆ ಸ್ಟೇಷನ್ ರಸ್ತೆ, ಸೊರಬ ರಸ್ತೆ ಹಾಗೂ ಮಾರಿಕಾಂಬ ರಸ್ತೆಗಳಲ್ಲಿ ಮಳೆಯಿಂದ ಹಾನಿಗೊಂಡ ಮನೆಗಳನ್ನು ವೀಕ್ಷಿಸಲಿದ್ದಾರೆ.
ಈ ಬಳಿಕ ಅಣಲೇಕೊಪ್ಪದ ಸ್ತ್ರೀ ಶಕ್ತಿ ಭವನದಲ್ಲಿ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿರುವಂತ ಪತ್ರಿಕಾ ದಿನಾಚಕರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದಾದ ಬಳಿಕ ಮತ್ತೆ ತಮ್ಮ ಮಳೆಹಾನಿ ಪ್ರದೇಶಗಳಿಗೆ ಭೇಟಿ ಮುಂದುವರೆಸಲಿರುವಂತ ಅವರು, ಮಧ್ಯಾಹ್ನ 3.30ರಿಂದ ಸಾಗರದ ಗಾಂಧಿನಗರ, ಜನ್ನತ್ ನಗರ, ಎ.ಕೆ ಕಾಲೋನಿ, ಎಸ್ ಎನ್ ನಗರಗಳಲ್ಲಿ ಮಳೆಯಿಂದಾಗಿ ಹಾನಿಗೊಂಡಿರುವಂತ ಮನೆಗಳನ್ನು ವೀಕ್ಷಣೆ ಮಾಡಲಿದ್ದಾರೆ. ಅಲ್ಲದೇ ಸಂತ್ರಸ್ತರಾದಂತವರಿಗೆ ಸ್ಥಳದಲ್ಲೇ ಪರಿಹಾರ ನೀಡುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ನಾಳೆ ಇಡೀ ದಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಾಗರ ನಗರದ ವಿವಿಧೆಡೆ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಣೆ ಮಾಡಲಿದ್ದಾರೆ. ಜೊತೆಗೆ ಮಳೆಹಾನಿಗೆ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳೋದಕ್ಕೆ ಖಡಕ್ ಸೂಚನೆ ನೀಡಲಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಭಾರೀ ಮಳೆ ಹಿನ್ನಲೆ: ನಾಳೆ ಸಾಗರ, ಹೊಸನಗರ ತಾಲ್ಲೂಕಿನ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಣೆ
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಹೆಚ್ಚುವರಿ ನಿಲುಗಡೆಗೆ ಅವಕಾಶ