ಬೆಂಗಳೂರು : ನಾನು ಹೋರಾಟದ ಮೇಲೆ ಎರಡು ಸಲ ಜೈಲಿಗೆ ಹೋಗಿದ್ದೆ. ಜೈಲಲ್ಲಿ ಊಟ ನನಗೆ ಏನು ಸಮಸ್ಯೆ ಅನಿಸಿಲ್ಲ. ಜೈಲೂಟ ನನಗೆ ಇಷ್ಟ ಆಯ್ತು. ನನ್ನ ಹುಟ್ಟುಹಬ್ಬ ಒಂದು ಬಾರಿ ಜೈಲಲ್ಲಿ ಇದ್ದಾಗ ಬಂದಿತ್ತು. ಆಗ ಪುಳಿಯೋಗರೆ ಕೊಟ್ಟಿದ್ರು ಆಗ ತುಂಬಾ ಚೆನ್ನಾಗಿತ್ತು. ಪುಳಿಯೋಗರೆ ಚಿತ್ರಾನ್ನ, ಅನ್ನ ಸಾಂಬಾರು , ಮುದ್ದೆ ಎಲ್ಲವೂ ನನಗೆ ಇಷ್ಟ ಆಯ್ತು ಎಂದು ನಟ ಚೇತನ್ ಅಹಿಂಸಾ ತಿಳಿಸಿದರು.
ಇಂದು ಅವರು ಸುದ್ದಿಗರರೊಂದಿಗೆ ಮಾತನಾಡುತ್ತ ನಟ ದರ್ಶನ್ ಅವರು ಜೈಲು ಸೇರಿರುವ ವಿಚಾರವಾಗಿ ಮಾತನಾಡುತ್ತಾ, ದರ್ಶನ್ ರನ್ನು ಒಂದೆರಡು ಬಾರಿ ಮಾತ್ರ ಬೇಟಿಯಾಗಿದ್ದೇನೆ ಅಷ್ಟೇ. ಅವರ ವಿಚಾರ ಮಾಧ್ಯಮದಿಂದ ಮಾತ್ರ ಗೊತ್ತಾಗಿದೆ. ಅವರ ಸಿನಿಮಾದಲ್ಲಿ ಕಂಟೆಂಟ್ ಗಿಂತ ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಅವರು ಹೆಚ್ಚು ಸಿನಿಮಾ ಮಾಡುತ್ತಾರೆ.
ಸಿನಿಮಾದಲ್ಲಿ ಹೀರೋ ದರ್ಶನ್ ಬಿಟ್ಟು ಬೇರೆ ಯಾರು ಆ ಜಾಗದಲ್ಲಿ ಮಾಡಿದ್ರು, ಸಿನಿಮಾ ಸಕ್ಸಸ್ ಆಗುತ್ತೆ ಅಥವಾ ಸಕ್ಸಸ್ ಆಗಲ್ಲ ಅಂದ್ರೆ ಯಾರು ಇದ್ರು ಆಗಲ್ಲ. ನಮಗೆ ಸ್ಟಾರ್ ಕಲ್ಚರ್ ಇದ್ದಾಗ ಇಂತಹವರಿಗೆ ವ್ಯಾಲ್ಯೂ ಕೊಡುತ್ತೇವೆ. ಸಿನಿಮಾರಂಗದ ಆಸ್ತಿ ಅಂತ ಮಾಡಿಬಿಡುತ್ತೇವೆ ಸಿನಿಮಾರಂಗದಲ್ಲಿ ಮೌನ ಬಿಟ್ಟು ಸತ್ಯ ಹೇಳುವ ಕೆಲಸ ಎಲ್ಲರೂ ಮಾಡಬೇಕು. ಚಿತ್ರರಂಗ ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಟಾರ್ ಗಿರಿಯಿಂದ ಸಿನಿಮಾ ಬೆಳೆಯಲ್ಲ. ಒಳ್ಳೆ ಕಥೆಯಿಂದ ಸಿನಿಮಾರಂಗ ಬೆಳೆಯುತ್ತೆ. ಎಂದರು.
ನಾನು ಹೋರಾಟದ ಮೇಲೆ ಎರಡು ಸಲ ಜೈಲಿಗೆ ಹೋಗಿದ್ದೆ. ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ ಸೆಲ್ ನಲ್ಲಿ ಹಾಕಿದ್ರು. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್ ನಲ್ಲಿ ಹಾಕಿದ್ರು. ಜೈಲಲ್ಲಿ ಸ್ವಲ್ಪ ಕಷ್ಟ ಆಗುತ್ತೆ. ಆದ್ರೆ ಮಂತ್ರಿಗಳು ಗೊತ್ತಿರುವವರ ಪ್ರಭಾವದಿಂದ ಅವರಿಗೆ ಸಿಕ್ಕಿರಬಹುದು. ಸೆಲೆಬ್ರಿಟಿ ಸೌಲಭ್ಯ ಸಿಕ್ಕಿದ್ರೆ ಕಷ್ಟ ಆಗದೇನು ಇರಬಹುದು.
ಜೈಲಲ್ಲಿ ಊಟ ನನಗೆ ಏನು ಸಮಸ್ಯೆ ಅನಿಸಿಲ್ಲ. ಜೈಲೂಟ ನನಗೆ ಇಷ್ಟ ಆಯ್ತು. ನನ್ನ ಹುಟ್ಟುಹಬ್ಬ ಒಂದು ಬಾರಿ ಜೈಲಲ್ಲಿ ಇದ್ದಾಗ ಬಂದಿತ್ತು. ಆಗ ಪುಳಿಯೋಗರೆ ಕೊಟ್ಟಿದ್ರು ಆಗ ತುಂಬಾ ಚೆನ್ನಾಗಿತ್ತು. ಪುಳಿಯೋಗರೆ ಚಿತ್ರಾನ್ನ, ಅನ್ನ ಸಾಂಬಾರು , ಮುದ್ದೆ ಎಲ್ಲವೂ ನನಗೆ ಇಷ್ಟ ಆಯ್ತು ಎಂದು ನಟ ಚೇತನ್ ಅಹಿಂಸಾ ತಿಳಿಸಿದರು.