ಅನಂತ್ನಾಗ್ : ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಐದು ಮನೆಗಳು ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿವೆ. ಅನಂತ್ನಾಗ್ನ ಮಟ್ಟನ್ ಪ್ರದೇಶದಲ್ಲಿ ರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕಾಶ್ಮೀರಿ ಪಂಡಿತ ಸಮುದಾಯದ ಹಳೆಯ ಮನೆಗಳು ನಾಶವಾಗಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದು, ಬೆಂಕಿಯ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕಾಶ್ಮೀರಿ ಪಂಡಿತ ಸಮುದಾಯವನ್ನ ಬೆದರಿಸಲು ಮತ್ತು ಅವರು ಕಣಿವೆಗೆ ಮರಳದಂತೆ ತಡೆಯಲು ಬೆಂಕಿ ಹಚ್ಚಲಾಗಿದೆ ಎಂದು ಕಾಶ್ಮೀರದ ಹೊರಗೆ ವಾಸಿಸುವ ಕಾಶ್ಮೀರಿ ಪಂಡಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಅನಂತ್ನಾಗ್ನ ಮಟ್ಟನ್ನಲ್ಲಿ ಹಲವಾರು ಮನೆಗಳನ್ನ ನಾಶಪಡಿಸಿದ ದುರಂತ ಬೆಂಕಿಯ ನಂತರ ಕಾಶ್ಮೀರಿ ಪಂಡಿತ್ ಸಹೋದರರೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ರಾಜಕೀಯ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.
ನಾಯಿ ಮುಕ್ತ ಟರ್ಕಿ : 40 ಲಕ್ಷ ಬೀದಿ ನಾಯಿಗಳನ್ನ ಆಶ್ರಯ ತಾಣಗಳಿಗೆ ಸೇರಿಸುವ ಮಸೂದೆಗೆ ಅಂಗೀಕಾರ
ALERT : `ಚಹಾ’ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಈ `ಟೀ’ ಕುಡಿದ್ರೆ `ಕ್ಯಾನ್ಸರ್’ ಅಪಾಯ ಹೆಚ್ಚು!
BREAKING : ‘NEET UG ಕೌನ್ಸೆಲಿಂಗ್’ಗೆ ವೇಳಾಪಟ್ಟಿ ಪ್ರಕಟ ; ಆಗಸ್ಟ್ 14ರಿಂದ ನೋಂದಣಿ ಪ್ರಾರಂಭ