ಬಾಗಲಕೋಟೆ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಗೆ ಇಡಿ ಅಧಿಕಾರಿಗಳು ಸ್ವತಃ ತಾವೇ ಬಂದು ತನಿಖೆ ಮಾಡುತ್ತಿದ್ದಾರೋ, ಅದೇ ರೀತಿ ಮುಡಾದಲ್ಲೂ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಬಂದು ತನಿಖೆ ಮಾಡಲಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸವಾಲು ಹಾಕಿದರು.
ಇಂದು ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಡಾ ವಿಚಾರದಲ್ಲಿ ಯಾರೂ ತಪ್ಪು ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಜಮೀನು ಹೋಗಿದ್ದು ಮೂರು ಎಕರೆ ಅದಕ್ಕೆ ಬದಲಿಯಾಗಿ ಒಂದು ಎಕರೆಗಿಂತ ಕಡಿಮೆ ಜಮೀನು ಸಿಕ್ಕಿದೆ.
ಭೂಮಿ ಕಳೆದುಕೊಂಡವರಿಗೆ ಪರಿಹಾರವಾಗಿ ನಿವೇಶನ ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ನಿವೇಶನ ಕೊಟ್ಟಿದ್ದು, ಪರ್ಯಾಯವಾಗಿ ನಿವೇಶನ ನೀಡಿದ್ದು ಕಾನೂನಾತ್ಮಕವಾಗಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಇಡಿಹೆ ಕೊಟ್ಟಿದ್ವಾ?ಇಡಿ ಅಧಿಕಾರಿಗಳೇ ಬಂದು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಹಾಗೆಯೇ ಮುಡಾ ಪ್ರಕರಣ ಮಾಡಲಿ ಎಂದು ಕೃಷ್ಣಬೈರೇಗೌಡ ಸವಾಲು ಹಾಕಿದರು.