ವಯನಾಡು: ಕೇರಳದ ವಯಾನಾಡಿನಲ್ಲಿ ಭೀಕರ ಭೂ ಕುಸಿತ ಉಂಟಾಗಿತ್ತು. ಐವರು ಮಕ್ಕಳು ಸೇರಿದಂತೆ ಈವರೆಗೆ 54 ಮಂದಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದೀಗ ಭೂ ಕುಸಿತದಲ್ಲಿ ಸಿಲುಕಿರುವಂತರ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಾಯುಪಡೆ ಇಳಿಯುತ್ತಿದೆ.
ಈ ಬಗ್ಗೆ ಐಎಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೇರಳ ಸರ್ಕಾರ ಮತ್ತು ಎನ್ಡಿಆರ್ಎಫ್ ಅಧಿಕಾರಿಗಳ ಸಮನ್ವಯದೊಂದಿಗೆ ವಯನಾಡ್ನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆ (ಐಎಎಫ್) ತಲಾ ಒಂದು ಎಂಐ -17 ಮತ್ತು ಎಎಲ್ಎಚ್ ಧ್ರುವ್ ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ.
Indian Air Force (IAF) has deployed one each Mi-17 and ALH Dhruv choppers for rescue and relief operations in Wayanad, in coordination with Kerala government and NDRF officials: IAF officials
— ANI (@ANI) July 30, 2024
BREAKING :40 ವರ್ಷಗಳ ಹಿಂದೆಯೇ HD ಕುಮಾರಸ್ವಾಮಿಗೆ ‘ಮುಡಾ’ ಸೈಟ್ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ ತಿರುಗೇಟು