ಬಾಗಲಕೋಟೆ : ಅತ್ತ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಇತ್ತ ರಾಜ್ಯದಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಪ್ರವಾಹದ ಭೀತಿ ಕೂಡ ಹೆಚ್ಚಾಗಿದೆ. ಇದರಿಂದ ಉತ್ತರಕರ್ನಾಟಕದ ಹಲವು ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರಿಂದ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ಇದೀಗ ಬಾಗಲಕೋಟೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ.
ಈಗಾಗಲೇ ರೈತರು ಮುಂಗಾರಿನಲ್ಲಿ ಬಿದ್ದಂತಹ ಮಳೆಗೆ ಬಿತ್ತನೆ ಮಾಡಿದ್ದು, ಸುಮಾರು ರಾಜ್ಯದಲ್ಲಿ 66 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಆದರೆ ಇದೀಗ ಅತಿಯಾದ ಮಳೆಯಿಂದ ಹೊಲದಲ್ಲಿ ಗದ್ದೆಗಳಲ್ಲಿ ನೀರು ನಿಂತುಕೊಂಡಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸುಲುಕಿಕೊಂಡಿದ್ದಾರೆ.
ಈ ಕುರಿತು ರೈತರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರ ಈ ಕೂಡಲೇ ಬೆಳೆ ನಷ್ಟಕ್ಕೆ ಶಾಶ್ವತ ಪರಿಹಾರ ನೀಡಲೇಬೇಕು. ಬೀಜಗಳನ್ನು ಕೊಂಡು ಅದನ್ನು ಬಿತ್ತನೆ ಮಾಡಿದಾಗಲೇ ಸಾಕಷ್ಟು ಖರ್ಚಾಗಿರುತ್ತದೆ. ಆದರೆ ತಾತ್ಕಾಲಿಕ ಪರಿಹಾರದಿಂದ ನಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಶಾಶ್ವತ ಪರಿಹಾರ ನೀಡಬೇಕೆಂದು ರೈತರೊಬ್ಬರು ಆಗ್ರಹಿಸಿದ್ದಾರೆ.