ರಾಮನಗರ : ರಾಮನಗರ ಎಂಬ ಹೆಸರಿದ್ರೆ ಅಭಿವೃದ್ಧಿ ಆಗತ್ತಾ? ಕುಮಾರಸ್ವಾಮಿ ರಾಮನಗರವನ್ನ ಅಭಿವೃದ್ಧಿ ಮಾಡಿದ್ದಾರ? ಜಿಲ್ಲೆ ಮಾಡಿ ನಾಲ್ಕು ಬಿಲ್ಡಿಂಗ್ ಕಟ್ಟಿದ್ದು ಬಿಟ್ರೆ ಇನ್ನೇನಾಗಿದೆ ಅಭಿವೃದ್ಧಿ? ಎಂದು ಕಾಂಗ್ರೆಸ್ ಶಾಸಕ ಎಚ್.ಬಾಲಕೃಷ್ಣ HD ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಅವರು ರಾಮನಗರ ಜಿಲ್ಲೆಗೆ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಮನಗರ ಜಿಲ್ಲೆ ಮಾಡಿದ್ದಾಗಿ ಹೇಳ್ತಾರಲ್ಲ, ಅಭಿವೃದ್ಧಿ ಮಾಡಿದ್ದಾರಾ? ನಾಲ್ಕು ಬಿಲ್ಡಿಂಗ್ ಕಟ್ಟಿದ್ದು ಬಿಟ್ರೆ, ಇನ್ನೇನಾಗಿದೆ ಅಭಿವೃದ್ಧಿ. 20 ವರ್ಷ ರಾಜ್ಯಭಾರ ಮಾಡಿ ರಾಮನಗರವನ್ನು ಕಸದ ತೊಟ್ಟಿ ಮಾಡಿದ್ದಾರೆ ಎಂದರು.
ಕನಕಪುರಕ್ಕೂ ರಾಮನಗರ ಅಭಿವೃದ್ಧಿ ಹೇಗಿದೆ ಗೊತ್ತ. ನಮಗೂ 20 ವರ್ಷ ಕೊಡಿ ಅಭಿವೃದ್ಧಿ ಮಾಡುತ್ತೇವೆ. ಅಭಿವೃದ್ಧಿ ಮಾಡಲಿಲ್ಲ ಅಂದ್ರೆ ಮತ್ತೆ ಬದಲಾವಣೆ ಮಾಡಿ. ಸಿಎಂ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನ ಸ್ವಲ್ಪ ದಿನದಲ್ಲಿ ರಾಮನಗರ ಹೇಗೆ ಬದಲಾವಣೆ ಆಗಲಿದೆ ಅಂತ ನೋಡಿ ಎಂದು ತಿಳಿಸಿದರು.