ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಕರಣದ A1 ಆರೋಪಿಯಾಗಿರುವ ಪವಿತ್ರ ಗೌಡ ಅವರನ್ನು ಅವರ ಕುಟುಂಬಸ್ಥರು ಭೇಟಿ ಮಾಡಿದರು.
ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದುವರೆ ತಿಂಗಳಿನಿಂದ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆ ಸಂದರ್ಭದಲ್ಲಿ ನಟ ದರ್ಶನ್ ಕೂಡ ಜೈಲಿನಲ್ಲಿದ್ದು ಅವರನ್ನು ನೋಡಲು ಅವರ ಪತ್ನಿ ಹಾಗು ಮಗ ಆಗಮಿಸಿದ್ದರು. ಇದೆ ವೇಳೆ ಪವಿತ್ರ ಗೌಡ ನನ್ನನ್ನು ಯಾಕೆ ನೋಡಲು ಬಂದಿಲ್ಲ ಎಂದು ಕುಟುಂಬಸ್ಥರಿಗೆ ಕರೆ ಮಾಡಿ ಆಕ್ರೋಶ ಹೊರ ಹಾಕಿದ್ದರು.
ಅದಾದ ಬಳಿಕ ಕುಟುಂಬಸ್ಥರು ಪವಿತ್ರ ಗೌಡ ಅವರನ್ನು ಭೇಟಿ ಮಾಡಲು ಬಂದಿದ್ದರು. ಪವಿತ್ರ ಗೌಡ ತಾಯಿ, ಮಗಳು ಮತ್ತು ಸಹೋದರ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದರು. ಇದೀಗ ಇಂದು ಕೂಡ ಪವಿತ್ರ ಗೌಡ ಅವರ ತಾಯಿ ಮಗಳು ಸಹೋದರ ಪವಿತ್ರ ಗೌಡ ಅವರನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ.