ಬೆಂಗಳೂರು : ನಾನು ಅಲ್ಪಸಂಖ್ಯಾತರ ಇಲಾಖೆಯಲ್ಲಿ ಇನ್ನೂ ಎಷ್ಟು ದಿನಗಳ ಕಾಲ ಸಚಿವನಾಗಿ ಇರುತ್ತೇನೆ ಗೊತ್ತಿಲ್ಲ. ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ.ದೇವರು ಯಾರ ಹಣೆಬರಹದಲ್ಲಿ ಏನು ಬರೆದಿದ್ದಾನೆ ಎನ್ನುವುದು ಯಾರಿಗೆ ಗೊತ್ತು ಎಂದು ಸಚಿವ ಜಮೀರ್ ಅಹ್ಮದ್ ಸಂಪುಟ ಸರ್ಜರಿ ಬಗ್ಗೆ ಸುಳಿವು ಕುರಿತು ಸ್ಪೋಟಕ ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಷ್ಟು ದಿನ ಸಚಿವನಾಗಿ ಇರುತ್ತೇನೆ ಗೊತ್ತಿಲ್ಲ. ಅಲ್ಪಸಂಖ್ಯಾತ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಜೀವಂತವಾಗಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ. ಯಾಕೆ ಅಂದರೆ ದೇವರು ಹಣೆಬರಹ ಬರೆದಿರುತ್ತಾನೆ ಎಂದರು.
ಈಗ ನನ್ನನ್ನು ಅಲ್ಪಸಂಖ್ಯಾತ ಸಚಿವರಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ಅಲ್ಲಿಯವರೆಗೂ ನಾನೇ ಅಲ್ಪಸಂಖ್ಯಾತ ಸಚಿವರಾಗಿರುತ್ತೇನೆ ಎಂಬ ವಿಶ್ವಾಸವಿದೆ. ಮನುಷ್ಯನಿಗೆ ಗ್ಯಾರಂಟಿ ಇದೆಯಾ ಯಾರು ಹೆಂಗೆ ಹೋಗುತ್ತಾರೆ ಗೊತ್ತಿಲ್ಲ. ನಾನು ಎಷ್ಟು ದಿನ ಬದುಕುತ್ತಿನೋ ಗೊತ್ತಿಲ್ಲ ಎಂದು ಅವರು ತಿಳಿಸಿದರು.