ದಾವಣಗೆರೆ : ಜಾತಿ ಪದ್ಧತಿ ಹೋಗಲ್ಲ ಎಂಬುವುದು ನನ್ನ ಅಭಿಪ್ರಾಯ. ನಾವು ಬದಲಾಗದಿದ್ದರೆ ಮುಂದೆಯೂ ಗ್ರಾಮಗಳ ಹೊರಗೆ ಇರಬೇಕಾಗುತ್ತದೆ ಎಂದು ದಾವಣಗೆರೆಯಲ್ಲಿ ಗೃಹ ಇಲಾಖೆಯ ಸಚಿವ ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಛಲವಾದಿ ಮಹಾಸಭೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿ, ನಾನು ಎಂಎ.ಪಿಎಚ್ ಡಿ ಮಾಡಿದ್ದೇನೆ. ಆದರೆ ನನ್ನ ಜಾತಿ ನನ್ನ ಬಿಟ್ಟು ಹೋಗುವುದಿಲ್ಲ. ಜಿ ಪರಮೇಶ್ವರ್ ಬುದ್ಧಿವಂತ ಆದರೆ ಪರಿಶಿಷ್ಟ ಜಾತಿಗೆ ಸೇರಿದ್ದಾನೆ ಇಲ್ಲದಿದ್ದರೆ ಎಲ್ಲೋ ಹೋಗುತ್ತಿದ್ದ ಅಂತ ಹೇಳುತ್ತಾರೆ. ಹೀಗಾಗಿ ಜಾತಿ ನಾಶವಾಗುತ್ತದೆ ಎಂಬುದು ಸಾಧ್ಯವಿಲ್ಲ ಎಡಬಲ ಹೀಗೆ ಹತ್ತಾರು ಗುಂಪುಗಳನ್ನು ಮಾಡಿದ್ದಾರೆ.ಈ ಜನ್ಮದಲ್ಲಿ ಒಂದಾಗದ ರೀತಿ ಸಮುದಾಯವನ್ನು ಒಡೆದು ಹಾಕಿದ್ದಾರೆ ಎಂದರು